Kannada NewsKarnataka NewsLatest

*17 ದಿನಗಳಾದರೂ ಕರಗದ ವೀರಾಂಜನೇಯ ಸ್ವಾಮಿಗೆ ಅಲಂಕರಿಸಿದ ಬೆಣ್ಣೆ*; *ಏನಿದು ಪವಾಡ?*

ಪ್ರಗತಿವಾಹಿನಿ ಸುದ್ದಿ: ದೇವರಿಗೆ ಅಲಂಕಿರಿಸುವ ಬೆಣ್ಣೆ ಸಾಮಾನ್ಯವಾಗಿ 2 ರಿಂದ 3 ಗಂಟೆಗಳಲ್ಲಿ ಕರಗಿ ಹೋಗುತ್ತದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ವೀರಾಂಜನೇಯನಿಗೆ ಲೇಪಿಸಿದ ಬೆಣ್ಣೆ ಅಲಂಕಾರ 17 ದಿನಗಳಾದರೂ ಕರಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.

ಧಾರವಾಡದ ಸಾಯಿ ನಗರದ ಕೃಷಿ ನಗರದಲ್ಲಿರುವ ವೀರಾಂಜನೇಯ ದೇವಸ್ಥಾನದಲ್ಲಿ 17 ದಿನಗಳಾದರೂ ವೀರಾಂಜನೇಯ ಸ್ವಾಮಿಗೆ ಹಚ್ಚಿರುವ ಬೆಣ್ಣೆ ಇನ್ನೂ ಕರಗಿಲ್ಲ. ಭಕ್ತರಲ್ಲಿ ಇದು ಅಚ್ಚರಿ ಮೂಡಿಸಿದೆ.

ಈ ಘಟನೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಕ್ಟೋಬರ್ 31 ರಂದು ವೀರಾ೦ಜನೇಯ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಈ ಅಲಂಕಾರದಲ್ಲಿ ಬೆಣ್ಣೆ ಮತ್ತು ವಿವಿಧ ಡ್ರೈ ಫ್ರೂಟ್‌ಗಳನ್ನು ಬಳಸಲಾಗಿತ್ತು. ಆ ದಿನದಿಂದ ಇಂದಿನವರೆಗೆ 17 ದಿನಗಳು ಕಳೆದಿದ್ದರೂ, ಆಂಜನೇಯನ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆಯು ಯಾವುದೇ ಬದಲಾವಣೆ ಇಲ್ಲದೆ ಹಾಗೆಯೇ ಉಳಿದಿದೆ.

ಇದು ದೇವರ ಪವಾಡ ಎಂದು ಭಕ್ತರು ನಂಬಿದ್ದಾರೆ. ಇಂತಹ ಘಟನೆಗಳು ವಿರಳವಾಗಿದ್ದು, ಭಕ್ತರು ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಘಟನೆಯು ದೈವಿಕ ಶಕ್ತಿಯ ಪ್ರತೀಕ ಎಂದು ಸ್ಥಳೀಯರು ಭಾವಿಸಿದ್ದಾರೆ. ಬೆಣ್ಣೆ ಕರಗದೇ ಇರುವುದು ದೇವಸ್ಥಾನದ ಇತಿಹಾಸದಲ್ಲಿ ಒಂದು ವಿಶಿಷ್ಟ ಘಟನೆಯಾಗಿ ದಾಖಲಾಗಿದೆ. ಮತ್ತೊಂದೆಡೆ 17 ದಿನಗಳಾದರೂ ಬೆಣ್ಣೆ ಕರಗದಿರುವುದು ಬೆಣ್ಣೆ ಗುಣಮಟ್ಟದ ಬಗ್ಗೆಯೂ ಅನುಮಾನ ವ್ಯಕ್ತವಾಗುವಂತೆ ಮಾಡಿದೆ. ಈ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ವೀರಾಂಜನೇಯನಿಗೆ ಲೇಪಿಸಿದ ಬೆಣ್ಣೆ ಕರಗಿದಿರುವ ಸುದ್ದಿ ತಿಳಿದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಅಚ್ಚರಿ ಕಣ್ತುಂಬಿಕೊಳ್ಳುತ್ತಿದ್ದಾರೆ.

Related Articles

Back to top button