Kannada NewsKarnataka NewsLatest

*ಧರ್ಮಸ್ಥಳ ಪ್ರಕರಣಕ್ಕೆ ಸ್ಫೋಟಕ ತಿರುವು: ಬಂಗ್ಲಗುಡ್ದದಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆ!*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಸೌಜನ್ಯಾ ಮಾವ ವಿಠಲಗೌಡ ಹೇಳಿದ್ದ ಬಂಗ್ಲಗುಡ್ಡ ಜಾಗದಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆಯಾಗಿವೆ.

ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಬಳಿಕ ಇದೀಗ ವಿಠಲ ಗೌಡನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಠಲಗೌಡ ಬಂಗ್ಲಗುಡ್ದದಲ್ಲಿ ಮೊದಲಿಗೆ ತಾನು ಮೂರು ಅಸ್ಥಿಪಂಜರ ನೋಡಿದ್ದಾಗಿ, ಎರಡನೇ ಬಾರಿ ಮಗುವಿನ ಅಸ್ಥಿಪಂಜರ ಸೇರಿ ಹೆಣಗಳ ರಾಶಿಯನ್ನೇ ನೊದಿದ್ದಾಗಿ ಹೇಳಿಕೆ ನೀಡಿದ್ದ. ಅಲ್ಲದೇ ವಾಮಾಚಾರಕ್ಕೆ ಬಳಸುವಂತಹ ವಸ್ತುಗಳನ್ನು ಅಲ್ಲಿ ಕಂಡಿದ್ದೇನೆ ಎಂದಿದ್ದ.

ಈ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಬಂಗ್ಲಗುಡ್ಡ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದೆ. ಬೆಳಿಗ್ಗೆ ನಡೆಸಿದ ಶೋಧದ ವೇಳೆ ಮಾನವನ ರಾಶಿ ರಾಶಿ ಮೂಳೆಗಳು ಪತ್ತೆಯಾಗಿತ್ತು. ಇದೀಗ ಮಧ್ಯಾಹ್ನ ಭೋಜನ ವಿರಾಮವನ್ನೂ ತೆಗೆದುಕೊಳ್ಳದೇ ಎಸ್ ಐಟಿ ಅಧಿಕಾರಿಗಳು ಮೂರು ತಂಡಗಳನ್ನು ರಚಿಸಿ ಶೋಧ ಮುಂದುವರೆಸಿದ್ದು, ಬಂಗ್ಲಗುಡ್ಡದ ಇನ್ನೆರಡು ಜಾಗಗಳಲ್ಲಿಯೂ ಮೂಳೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

Home add -Advt


Related Articles

Back to top button