Kannada NewsKarnataka NewsLatest
*ಧರ್ಮಸ್ಥಳ ಕೇಸ್: ಶವಗಳಿಗಾಗಿ ಚುರುಕುಗೊಂಡ ಶೋಧಕಾರ್ಯ: ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗಳ ಪಟ್ಟಿ ಕೇಳಿದ SIT*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳದ ವಿವಿಧ ಸ್ಥಳಗಳಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್ ಐಟಿ) ತನಿಖೆ ಹಾಗೂ ಶೋಧ ಕಾರ್ಯಾಚರಣೆ ಚುರುಕುಗೊಳಿಸಿದೆ.
ದೂರುದಾರ ತೋರಿಸಿರುವ ಸ್ಥಳಗಳಲ್ಲಿ ಮಣ್ಣುಗಳನ್ನು ಅಗೆದು ಶವಗಳ ಕಳೆಬರಹಕ್ಕಾಗಿ ಶೋಧಕಾರ್ಯಾಚರಣೆ ನಡೆಸಲಾಗುತ್ತಿದೆ. ಎರಡನೇ ದಿನವಾದ ಇಂದು ಶವ ಹೂತಿಟ್ಟ ಸ್ಥಳಗಳಲ್ಲಿ ಶೋಧ ಕಾರ್ಯ ಚುರುಕುಗೊಂಡಿದೆ.
ಈ ನಡುವೆ ಎಸ್ ಐಟಿ ಧರ್ಮಸ್ಥಳ ಠಾಣೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸರ ಪಟ್ಟಿ ನೀಡುವಂತೆ ಕೇಳಿದೆ. 1995ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದ ಪೊಲೀಸರ ಪಟ್ಟಿ ನಿಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿಗೆ ಎಐ ಟಿ ಮನವಿ ಮಾಡಿದೆ.