Kannada NewsKarnataka NewsLatestPolitics

*ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ*

ಪ್ರಗತಿವಾಹಿನಿ ಸುದ್ದಿ: ಧರ್ಮಸ್ಥಳ ಪ್ರಕರಣ ಸಂಬಂಧ ತನಿಖೆಗೆ ಸರ್ಕಾರ ಎಸ್ ಐಟಿ ರಚನೆ ಮಾಡಿದ್ದು, ಸತ್ಯ ಹೊರಬರುದೆ. ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.

ಧರ್ಮಸ್ಥಳ ಬೇರೆ, ಧರ್ಮಸ್ಥಳ ಊರಿನವರು ಬೇರೆಯಲ್ಲ. ಎಷ್ಟು ನಿಷ್ಠುರವಾದ ದಬ್ಬಾಳಿಕೆ ನಮ್ಮ ಮೇಲೆ ನಡೆದಿದೆ ಎಂದು ನಿವೂ ನೋಡಿದ್ದೀರಿ. ಯಾಕಿಷ್ಟು ದ್ವೇಷ ನನ್ನ ಮೇಲೆ? ಯಾಕಿಷ್ಟು ಹಗೆತನ? ನಾನು ಯಾರನ್ನೂ ಹೀಯಾಳಿಲ್ಲ, ಯಾರನ್ನೂ ದ್ವೇಷ ಮಾಡಿಲ್ಲ. ನಾವು ಸತ್ಯದಿಂದ ಇದ್ದೇವೆ. ನನಗೆ ವಿಶ್ವಾಸವಿದೆ ಎಂದು ಹೇಳಿದರು.

ಸರ್ಕಾರ ಎಸ್ ಐಟಿ ರಚನೆ ಮಾಡಿರುವುದಕ್ಕೆ ಕೃತಜ್ಞನಾಗಿದ್ದೇನೆ. ಕೆಲವರು ಪ್ರೀತಿಯಿಂದ ಟೀಕೆ ಮಾಡಿದರು. ಆದರೆ ಇವರು ಹಾಗೆ ಟೀಕೆ ಮಾಡಿಲ್ಲ. ಇಷ್ಟು ಹಗೆತನ, ಅಪವಾದ ಯಾಕೆ ಬಂತು ಎಂದು ನಮಗೆ ಗೊತ್ತಿಲ್ಲ. ನಾವು ಸೇವೆ ಮಾಡುತ್ತೇವೆ. ಆದರೆ ಸೇವೆ ಪ್ರಚಾರದ ವಸ್ತುವಲ್ಲ. ಇಷ್ಟು ವರ್ಷಗಳ ಕಾಲ ನಾವು ಆರೋಗ್ಯವಾಗಿರಲು ನಮ್ಮ ನಿಸ್ವಾರ್ಥ ಸೇವೆ ಕಾರಣ. ನಾವಿಲ್ಲಿ ನಿಮಿತ್ತ ಮಾತ್ರ. ಆಯಾ ಇಲಾಖೆಗಳು ಕಾರ್ಯಕ್ರಮ ಮುಂದುವರೆಸುತ್ತವೆ ಎಂದರು.

Home add -Advt

ಎಸ್ ಐಟಿಯಿಂದ ಅರ್ಧ ವರದಿ ಬಂದಿದೆ. ಹಾಗಾಗಿ ನಿಂದು ಧರ್ಯವಾಗಿದ್ದೇನೆ. ಇಷ್ಟು ಮಾತನಾಡುತ್ತಿದ್ದೇನೆ. ಈಗ ಮನಸ್ಸು ನಿರಾಳವಾಗಿದೆ. ನಮ್ಮ ಮೇಲೆ ದೃಢನಂಬಿಕೆ ಇಟ್ಟ ಎಲ್ಲರಿಗೂ ಧನ್ಯವಾದ. ನಾವು ತಪ್ಪು ಮಾಡದ ಕಾರಣ ನಮಗೆ ಆತ್ಮವಿಶ್ವಾಸವಿದೆ. ನಮ್ಮ ಹೊಳಪು ಹಾಗೇ ಉಳಿದಿದೆ. ಇದಕ್ಕೆ ನಾನು ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ಎಲ್ಲವನ್ನೂ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ನೋಡಿಕೊಳ್ಳುತ್ತಾರೆ. ನಾವು ಸತ್ಯದಿಂದ ಇದ್ದೇವೆ ಎಂದು ಹೇಳಿದರು.

Related Articles

Back to top button