Kannada NewsKarnataka News

*ಧರ್ಮಸ್ಥಳ ಕೇಸ್: ಇಂದು ಹೊಸ ಸ್ಥಳದಲ್ಲಿ ಉತ್ಖನನ*

ಪ್ರಗತಿವಾಹಿನಿ ಸುದ್ದಿ : ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿರುವ ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅನಾಮಿಕ ವ್ಯಕ್ತಿ ತೋರಿಸುತ್ತಿರುವ ಜಾಗಗಳಲ್ಲಿ ಉತ್ಖನನ ನಡೆಸಲಾಗುತಿತ್ತು. ಇಂದು ಮತ್ತೆ ಹೊಸ ಸ್ಥಳದಲ್ಲಿ  ಎಸ್ಐಟಿ ಅಧಿಕಾರಿಗಳು ಉತ್ಖನನ ನಡೆಸಲಿದ್ದಾರೆ ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದು ನಿನ್ನೆಯ ವಿರಾಮದ ಬಳಿಕ ಇಂದಿನಿಂದ ಮತ್ತೆ ಶೋಧ ಕಾರ್ಯ ಶುರುವಾಗುತ್ತಿದೆ. ಅನಾಮಿಕ ದೂರುದಾರ ನೀಡಿದ್ದ ಮಾಹಿತಿ ಆಧರಿಸಿ ಹೊಸ ಸ್ಥಳದಲ್ಲಿ ಈಗ ಉತ್ಖನನ ನಡೆಸಲಾಗುತ್ತಿದೆ.

ಆ. 9ರಂದು ಧರ್ಮಸ್ಥಳದ ಬಾಹುಬಲಿ ಬೆಟ್ಟದ ಸಮೀಪದ ಅರಣ್ಯದಲ್ಲಿ ಅನಾಮಿಕ ಗುರುತಿಸಿದ್ದ 16 ಮತ್ತು 16-A ಎರಡು ಜಾಗದಲ್ಲಿ ಕಾರ್ಯಾಚರಣೆ ನಡೆದಿತ್ತು. ಇವತ್ತು ರೇಡಾರ್ ಯಂತ್ರ ಬರುವ ಸಾಧ್ಯತೆಯಿದೆ ಎಂಬ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು ಖಚಿತವಾದಲ್ಲಿ ಅನಾಮಿಕ ಗುರುತಿಸಿದ ಬಹು ನಿರೀಕ್ಷಿತ 13ನೇ ಪಾಯಿಂಟ್ ನಲ್ಲಿ ಕಾರ್ಯಾಚರಣೆ ನಡೆಯಬಹುದೆನ್ನಲಾಗಿದೆ. ಅಲ್ಲದೆ ಹೊಸ ಸ್ಥಳವನ್ನು ಅನಾಮಿಕ ಗುರುತಿಸಿದಲ್ಲಿ 17ನೇ ಸ್ಪಾಟ್ ನಲ್ಲಿ ಶೋಧ ನಡೆಯುವ ಸಾಧ್ಯತೆಯಿದೆ. ಅನಾಮಿಕ ತೋರಿಸಿದ ಸ್ಥಳಗಳಲ್ಲಿ ಶೋಧ ನಡೆದ್ರೂ ಏನೂ ಸಿಕ್ಕಿಲ್ಲ. ಆದರೂ ಉತ್ಖನನ ಮುಂದುವರೆದಿದ್ದು ಹೊಸ ಸ್ಥಳದಲ್ಲಿ ಅಸ್ಥಿಪಂಜರ ಸಿಗಲಿದೆಯೇ? ಕಾದುನೋಡಬೇಕಿದೆ

Home add -Advt

Related Articles

Back to top button