GIT add 2024-1
Laxmi Tai add
Beereshwara 33

ಡಯಾಬಿಟೀಸ್ ನಿಯಂತ್ರಣ; ಸಂಶೋಧನೆಗಳು ಕಂಡುಕೊಂಡ ಸತ್ಯವೇನು ?

Yoga and dhyana will improve blood sugar level

Anvekar 3
Cancer Hospital 2

ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್: ಡಯಾಬಿಟಿಸ್ (ಮಧುಮೇಹ ) ರೋಗಿಗಳು ಯೋಗ ಮತ್ತು ಧ್ಯಾನದಲ್ಲಿ ತೊಡಗಿಕೊಂಡರೆ ಅವರ ರಕ್ತದಲ್ಲಿನ ಸಕ್ಕರೆಯ ಪ್ರಮಾಣದ ಮೇಲೆ ನಿಯಂತ್ರಣ ಸಾಧಿಸಲು ಸಾಧಿಸಲು ಸಾಧ್ಯ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಯೋಗದ ಕುರಿತು ಈ ಹಿಂದೆ ಹಲವು ಸಂಶೋಧನೆಗಳು ನಡೆದಿದ್ದರೂ, ಇತ್ತೀಚೆಗೆ ಫಾಮ್ ಹ್ಯಾರಿಸನ್ ಅವರ ಸಂಶೋಧನೆ ಮಹತ್ವದ್ದೆಂದು ಪರಿಗಣಿಸಲಾಗಿದೆ. ಜರ್ನಲ್ ಆಫ್ ಇಂಟಗ್ರೇಟಿವ್ ಎಂಡ್ ಕಾಂಪ್ಲಿಮೆಂಟರಿ ಮೆಡಿಸಿನ್‌ನಲ್ಲಿ ಇದನ್ನು ಪ್ರಕಟಿಸಲಾಗಿದೆ.

ಈ ಕುರಿತು ವಿಸ್ತ್ರತ ವರದಿ ಪ್ರಕಟಿಸಿರುವ ವಿಜ್ಞಾನಿ, ಲಾಸ್ ಏಂಜಿಲಿಸ್‌ನ ಕೇಕ್ ಸ್ಕೂಲ್ ಆಫ್ ಮೆಡಿಸಿನ್‌ನ ಸಾರ್ವಜನಿಕ ಆರೋಗ್ಯ ವಿಜ್ಞಾನಗಳ ಪ್ರಾಧ್ಯಾಪಕ ರಿಚರ್ಡ್ ವಟನಾಬೆ, ನಿರಂತರವಾಗಿ ಯೋಗ, ಧ್ಯಾನ ಅಥವಾ ಯಾವುದೇ ಮೈಂಡ್‌ಫುಲ್‌ನೆಸ್ ಚಟುವಟಿಕೆಗಳನ್ನು ನಡೆಸಿದ ಮಧುಮೇಹಿಗಳಲ್ಲಿ ರಕ್ತದ ಹಿಮೋಗ್ಲೋಬಿನ್‌ನಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು. ಈ ರೀತಿ ಸ್ಥಿರವಾದ ಪರಿಣಾಮವನ್ನು ಸಾಬೀತು ಮಾಡಿದ ಮೊದಲ ಅಧ್ಯಯನ ಇದಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಯೋಗವಾಗದಿದ್ದರೆ ಧ್ಯಾನ ಓಕೆ

Emergency Service

ತಮ್ಮ ಸಂಶೋಧನಾ ವರದಿಯಲ್ಲಿ, ಕೆಲವರಿಗೆ ದೈನಂದಿನ ಕೆಲಸಗಳ ಒತ್ತಡದಿಂದ ಯೋಗಾಭ್ಯಾಸ ಕೈಗೊಳ್ಳಲು ಸಾಧ್ಯವಾಗದೇ ಇರಬಹುದು. ಅಂಥಹ ಮಧುಮೇಹಿಗಳು ಧ್ಯಾನ ಮಾಡಿದರೂ ಸಹ ದೇಹದ ಸಕ್ಕರೆ ಅಂಶದಲ್ಲಿ ನಿಯಂತ್ರಣ ಸಾಧ್ಯವಿದೆ ಎಂದು ವಟನಾಬೆ ಉಲ್ಲೇಖಿಸಿದ್ದಾರೆ.

ಯೋಗ ಪರಿಣಾಮಕಾರಿ ಎಂಬುದು ತಿಳಿದಿತ್ತು. ಆದರೆ ಇಷ್ಟೊಂದು ಪರಿಣಾಮಕಾರಿ ಎಂಬುದು ಸಂಶೋಧನೆಯಿಂದಲೇ ತಿಳಿದುಬಂದಿದೆ ಎಂದು ಅವರು ಯೋಗದ ಪ್ರಬಾವದ ಬಗ್ಗೆ ಅಚ್ಚರಿಪಟ್ಟಿದ್ದಾರೆ.

ಹೇಗೆ ಪರಿಣಾಮಕಾರಿ ಎಂಬುದು ಸ್ಪಷ್ಟವಾಗಿಲ್ಲ

ಯೋಗ ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿಡುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಮನಸ್ಸು ಮತ್ತು ದೇಹದ ಸಂಬಂಧದಿಂದ ಯಾವುದೇ ರೋಗ ಲಕ್ಷಣಗಳು ಉಲ್ಬಣಗೊಳ್ಳುವುದು ಅಥವಾ ಕಡಿಮೆಯಾಗುವುದು ನಡೆಯುತ್ತದೆ. ಈ ವಿದ್ಯಮಾನವನ್ನು ಊಹೆ ಮಾಡಿದಾಗ, ಯೋಗವು ಮನಸ್ಸನ್ನು ಸಮತೋಲನದಲ್ಲಿಡುತ್ತದೆ, ಹಾಗಾಗಿ ಯೋಗ ಮತ್ತು ಧ್ಯಾನದಿಂದ ಮನಸ್ಸು ಸಮಾಧಾನಗೊಂಡು, ರಕ್ತದ ಒತ್ತಡವನ್ನು ಉತ್ತೇಜಿಸುವ ಹಾರ್ಮೋನುಗಳು ನಿಯಂತ್ರಣದಲ್ಲಿರುತ್ತವೆ. ಈ ಹಾರ್ಮೋನುಗಳು ಗ್ಲುಕೋಸ್‌ನ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಮನಸ್ಸು ಮತ್ತು ದೇಹದ ಮೇಲೆ ಸಮತೋಲನ ಸಾಧಿಸುವುದರಿಂದ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2: ಉದ್ಘಾಟನೆಗೆ ಮುನ್ನವೇ ಜಾಲತಾಣದಲ್ಲಿ ದರ್ಶನ

Bottom Add3
Bottom Ad 2