Latest

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2: ಉದ್ಘಾಟನೆಗೆ ಮುನ್ನವೇ ಜಾಲತಾಣದಲ್ಲಿ ದರ್ಶನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಉದ್ಘಾಟನೆಗೆ ಸಿದ್ಧವಾಗುತ್ತಿದೆ.

ಆದರೆ ಉದ್ಘಾಟನೆಗೆ ಮುನ್ನವೇ ಅದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 84 ಸೆಕೆಂಡುಗಳ ವಿಡಿಯೊ ಟರ್ಮಿನಲ್‌ನ ಕೆಲವು ವೈಶಿಷ್ಟ್ಯಗಳನ್ನು ತೋರಿಸಲಾಗಿದೆ.

ಈ ನೂತನ, ಅತ್ಯಾಧುನಿಕ  ವಿನ್ಯಾಸದ ಟರ್ಮಿನಲ್ ನ್ನು ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಈ ಮಧ್ಯೆ “ಟರ್ಮಿನಲ್ ಒಂದು ಮೇರುಕೃತಿಗಿಂತ ಕಡಿಮೆ ಏನಿಲ್ಲ” ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಬಣ್ಣಿಸಿದ್ದಾರೆ.

‘ಜೈ ಜೈ ಮಹಾರಾಷ್ಟ್ರ ಮಾಝಾ..’ ಇನ್ನುಮುಂದೆ ಮಹಾರಾಷ್ಟ್ರದ ಅಧಿಕೃತ ನಾಡಗೀತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button