Latest

‘ಜೈ ಜೈ ಮಹಾರಾಷ್ಟ್ರ ಮಾಝಾ..’ ಇನ್ನುಮುಂದೆ ಮಹಾರಾಷ್ಟ್ರದ ಅಧಿಕೃತ ನಾಡಗೀತೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ‘ಜೈ ಜೈ ಮಹಾರಾಷ್ಟ್ರ ಮಾಝಾ..’ ಗೀತೆಯನ್ನು ಮಹಾರಾಷ್ಟ್ರ ರಾಜ್ಯದ ಅಧಿಕೃತ ಗೀತೆಯಾಗಿ ಅಳವಡಿಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ.

ಮಹಾರಾಷ್ಟ್ರ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಈ ವಿಷಯ ಬಹಿರಂಗಪಡಿಸಿದ್ದಾರೆ.

“ಈ ಹಾಡು ವಾತ್ಸಲ್ಯ ಭಾವನೆ ಮತ್ತು ಉತ್ಸಾಹವನ್ನು ಹೊಂದಿದೆ. ಮತ್ತು ನಾವು ಇದನ್ನು ರಾಜ್ಯದ ಅಧಿಕೃತ ಹಾಡಾಗಿ ಅಳವಡಿಸಿಕೊಳ್ಳಲು ನಿರ್ಧರಿಸಿದ್ದೇವೆ” ಎಂದು ಮುಂಗಂತಿವಾರ್ ಹೇಳಿದರು.

ರಾಜ್ಯ ಸರಕಾರ ಈ ಹಾಡಿನ ಎರಡು ಪ್ಯಾರಾಗಳನ್ನು ಮಾತ್ರ ನಾಡಗೀತೆಯಾಗಿ ಅಳವಡಿಸಿಕೊಳ್ಳಲಿದೆ ಎನ್ನಲಾಗಿದೆ.

ಕವಿ ರಾಜಾ ಬಢೆ ಅವರು ವಿರಚಿಸಿರುವ ಈ ನಾಡಭಕ್ತಿಗೀತೆಗೆ ಶ್ರೀನಿವಾಸ ಖಳೆ ಅವರು ಸಂಗೀತ ಸಂಯೋಜಿಸಿದ್ದಾರೆ.

ವಾಹನ ಚಾಲಕರೇ ಗಮನಿಸಿ; ಇದಿನಿಂದ ಜಾರಿಯಾಗಿದೆ ಹೊಸ ನಿಯಮ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button