ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: “ಡಿಜಿಟಲ್ ಅತ್ಯಾಚಾರ’ (Digital Rape) ಇತ್ತೀಚಿನ ದಿನಗಳಲ್ಲಿ ಬಹು ಚಾಲ್ತಿಯಲ್ಲಿರುವ ಈ ಶಬ್ದ ಕೋಟ್ಯಾಂತರ ಜನರ ಮೆದುಳು ಕೊರೆದಿದೆ. ನಾನಾ ರೀತಿಯ ವ್ಯಾಖ್ಯಾನಗಳು, ವಿಮರ್ಷೆಗಳಿಗೂ ಕಾರಣವಾಗಿದೆ.
ಅನೇಕ ಜನ ಡಿಜಿಟಲ್ ಅತ್ಯಾಚಾರ ಎಂದರೆ ಆನ್ ಲೈನ್ ನಲ್ಲಿ ನಡೆಯುವ ಅತ್ಯಾಚಾರ ಎಂದು ವ್ಯಾಖ್ಯಾನಿಸಿ ಕೆಲವರಿಂದ ನಗೆಪಾಟಲಿಗೀಡಾದರೆ ಇನ್ನಷ್ಟು ಜನರ ತಲೆಯಲ್ಲಿ ಅದು ಹೇಗೆ ಸಾಧ್ಯ ಎಂಬ ಹುಳಬಿಟ್ಟಿದ್ದೂ ಇದೆ.
ವಾಸ್ತವದಲ್ಲಿ ಡಿಜಿಟಲ್ ಅತ್ಯಾಚಾರ ಎಂದರೇನು? ಯಾರೊಬ್ಬರ ಖಾಸಗಿ ಭಾಗಗಳಲ್ಲಿ ಕೈ ಅಥವಾ ಕಾಲು ಬೆರಳುಗಳನ್ನು ಬಲವಂತವಾಗಿ ತೂರಿಸುವ ಪ್ರಕ್ರಿಯೆ ಡಿಜಿಟಲ್ ಅತ್ಯಾಚಾರ ಎಂದು ಹೇಳಲ್ಪಟ್ಟಿದೆ.
2012ರವರೆಗೂ ಇದನ್ನು ಕೇವಲ ಕಿರುಕುಳ ಎಂದು ಪರಿಗಣಿಸಲಾಗಿತ್ತು. ಆದರೆ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಇದನ್ನು ಲೈಂಗಿಕ ಅಪರಾಧ ಎಂದು ಪರಿಗಣಿಸಲಾಯಿತು.
ಇತ್ತೀಚೆಗೆ ನೊಯ್ಡಾದಲ್ಲಿ 3 ವರ್ಷದ ಮಗುವಿನ ಮೇಲೆ ನಡೆದ ಡಿಜಿಟಲ್ ಅತ್ಯಾಚಾರಕ್ಕಾಗಿ 65 ವರ್ಷದ ವೃದ್ಧನೊಬ್ಬ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದನ್ನಿಲ್ಲಿ ಸ್ಮರಿಸಬಹುದು.
ಇನ್ನು ಮುಂದೆ ಟ್ವೀಟ್ ಮಾಡುವಾಗ ಎಡವಟ್ಟಾದರೆ ಭಯಪಡಬೇಕಿಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ