Film & Entertainment

*ದುನಿಯಾ ವಿಜಯ್-ನಾಗರತ್ನಾ ವಿಚ್ಛೇದನ ಪ್ರಕರಣ; ಇಂದು ತೀರ್ಪು ಸಾಧ್ಯತೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ವಿಚ್ಛೇದನ ಪ್ರಕರಣಗಳು ನಡೆಯುತ್ತಿವೆ. ಚಂದನ್ ಶೆಟ್ಟಿ-ನಿವೇದಿತಾ ಗೌಡ ಬಳಿಕ ಯುವ ರಾಜ್ ಕುಮಾರ್-ಶ್ರೀದೇವಿ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ದುನಯಾ ವಿಜಯ್ ಹಾಗೂ ಪತ್ನಿ ನಾಗರತ್ನಾ ವಿಚ್ಛೇದನ ಪ್ರಕರಣದ ಕುರಿತ ತೀರ್ಪು ಇಂದು ಹೊರಬೀಳಲಿದೆ.

ನಟ ದುನಯಾ ವಿಜಯ್ ಪತ್ನಿಯಿಂದ ವಿಚ್ಛೇದನ ಬಯಸಿ 2018ರಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಾಗರತ್ನಾ ವಿಚ್ಛೇದನ ನೀಡುವುದಿಲ್ಲ. ತನಗೆ ಪತಿ ಬೇಕು ಎಂದು ಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಇಬ್ಬರ ನಡುವೆ ಹಲವು ಬಾರಿ ಹೊಂದಾಣಿಕೆಗೂ ನ್ಯಾಯಾಲಯ ಮುಂದಾಗಿತ್ತು. ಆದರೆ ದುನಿಯಾ ವಿಜಯ್ ನಾಗರತ್ನಾ ಅವರಿಂದ ವಿಚ್ಛೇದನ ಬೇಕೆಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ.

ದುನಿಯಾ ವಿಜಯ್ ಹಾಗೂ ನಾಗರತ್ನಾ ವಿಚ್ಛೇದನ ಪ್ರಕರಣ ಬೆಂಗಳೂರಿನ ಶಾಂತಿನಗರದಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಇಂದು ಮಧ್ಯಾಹ್ನ 3 ಗಂಟೆಗೆ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button