Belagavi NewsBelgaum NewsKannada NewsKarnataka News

ನೇರ ಸಂದರ್ಶನ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಷ್ಟ್ರೀಯ ಆರೋಗ್ಯ ಅಭಿಯಾನ ೧೫ನೇ ಹಣಕಾಸು ಆಯೋಗದ ಅಡಿಯಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ಆರಂಭಗೊಂಡ ಸಾರ್ವಜನಿಕ ಆಸ್ಪತ್ರೆ ಅಥಣಿ, ರಾಯಬಾಗ, ರಾಮದುರ್ಗ ಚಿಕ್ಕೋಡಿ ಸವದತ್ತಿ ತಾಲೂಕಿನಲ್ಲಿ Block Level Public Health Unit ಗಳಿಗೆ ಬ್ಲಾಕ್ ಎಪಿಡೆಮಿಯಾಲಾಜಿಸ್ಟ್ ಕಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶದ ಆಯೋಜಿಸಲಾಗಿದೆ.
ಪ್ರಿವೆಂಟಿವ್ ಮತ್ತು ಸೋಶಿಯಲ್ ಮೆಡಿಸಿನ್/ಸಾರ್ವಜನಿಕ ಆರೋಗ್ಯ ಅಥವಾ ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಹೊಂದಿರುವ ವೈದ್ಯಕೀಯ ಪದವೀಧರರು (ಉದಾಹರಣೆಗೆ ಎಮ್‌ಡಿ, ಎಮ್‌ಪಿಎಚ್, ಡಿಪಿಎಚ್, ಎಮ್‌ಎಇ ಇತ್ಯಾದಿ) ಅಥವಾ ಸಾರ್ವಜನಿಕ ಆರೋಗ್ಯ/ ಅಪೇಕ್ಷಣೀಯ ಅಥವಾ ಮಾಸ್ಟರ ಆಪ್ ಸೈನ್ಸ ಇನ್ ಲೈಪ್ ಸೈನ್ಸ್ ಕ್ಷೇತ್ರದಲ್ಲ್ಲಿ ೨ ವರ್ಷ ಅನುಭವ ಹೊಂದಿರುವ ಯಾವುದೇ ವೈದ್ಯಕೀಯ ಪದವೀಧರರು, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ೨ ವರ್ಷ ಅನುಭವ ಹೊಂದಿರಬೇಕು.
ಸಾರ್ವಜನಿಕ ಆರೋಗ್ಯ ಕಾರ್ಯಕ್ರಮ ಅಥವಾ ಸಾಂಕ್ರಾಮಿಕ ರೋಗಶಾಸ್ತ್ರದಲ್ಲಿ ಕನಿಷ್ಠ ೨ ವರ್ಷಗಳ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ಇರುತ್ತದೆ. ವಯೋಮಿತಿ ಸಾಮಾನ್ಯ ಅಭ್ಯರ್ಥಿ-೩೫, ಪ್ರ ವರ್ಗ-೧, ೨ಎ ೨ಬಿ, ೩ಎ, ೩ಬಿ-೩೮ ಹಾಗೂ ಪ.ಜಾ.ತಿ, ಪ.ಪಂಗಡ-೪೦ ಹೊಂದಿರಬೇಕು. ಮುಕ್ತ ವಿಶ್ವವಿದ್ಯಾಲಯದ ಅಭ್ಯರ್ಥಿಗಳಿಗೆ ಅವಕಾಶವಿರುವದಿಲ್ಲ.
ಆಸಕ್ತರು ಫೆ.೨೦ ರಂದು ಬೆಳಗ್ಗೆ ೧೦ ಘಂಟೆಗೆ ಬೆಳಗಾವಿಯ ಟಿಳಕವಾಡಿ ಲಸಿಕಾ ಕೇಂದ್ರ ಆವರಣದ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳ ಸಭಾಂಗಣದಲ್ಲಿ ಅರ್ಹ ಅಭ್ಯರ್ಥಿಗಳ ವಿದ್ಯಾರ್ಹತೆ ಅನುಭವ, ಇತೀಚಿನ ೦೨ ಭಾವ ಚಿತ್ರ ಹಾಗೂ ಅಗತ್ಯ ಮೂಲ ಹಾಗೂ ನಕಲು ಒಂದು ಸೇಟ್ ದೃಡೀಕೃತ ಪ್ರತಿಗಳನ್ನು ತೆಗೆದುಕೊಂಡು ನೇರ ಸಂದರ್ಶಕ್ಕೆ ಹಾಜರಾಗುವಂತೆ ಬೆಳಗಾವಿಯ ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button