
ಪ್ರಗತಿವಾಹಿನಿ ಸುದ್ದಿ: ದೆಹಲಿಯ ಅನೇಕ ಕಡೆ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲೇ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು.
ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಸಾಕಷ್ಟು ಅನಾಹುತಗಳಾಗಿದ್ದು ಅನೇಕ ಕಡೆ ಮಳೆಗೆ ರಸ್ತೆಗಳೆಲ್ಲಾ ಪ್ರವಾಹದಂತಾಗಿದ್ದು, ಹಲವು ರಸ್ತೆಗಳು ಜಲಾವೃತವಾಗಿವೆ.
ದೆಗಲಿಯ ನೆಹರೂ ಪ್ಲೇಸ್, ಅರಬಿಂದೋ ಮಾರ್ಗ, ಕೈಲಾಶ್ ಕಾಲೋನಿ, ಲಜಪತ್ ನಗರ, ಸಿರಿ ಫೋರ್ಟ್ ರಸ್ತೆ ಚಿರಾಗ್ ದೆಹಲಿ ಪ್ರೈಓವರ್, ಔಟರ್ ರಿಂಗ್ ರಸ್ತೆ ಜಿಕೆ ಮಾರ್ಗ, ರೈಲ್ ಭವನ, ಅಕ್ಷರಧಾಮ ಆಶ್ರಮ, ಐಟಿಒ, ಪುಲ್ ಪ್ರಹ್ಲಾದ್‌ಪುರ, ಎಂಬಿ ರಸ್ತೆ, ಎಂಜಿ ರಸ್ತೆ ಓಲ್ಡ್ ರೋಹಕ್ ರಸ್ತೆ, ಶಾದಿಪುರ, ಮಧುಬನ್ ಚೌಕ್ ಮತ್ತು ರಾಷ್ಟ್ರೀಯ ಹೆದ್ದಾರಿ 8 ಸೇರಿದಂತೆ ನಗರದ ಹಲವಾರು ಭಾಗಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ.
ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ದೆಹಲಿಯಲ್ಲಿನ ಮಳೆ ಅವಾಂತರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.