Film & EntertainmentKannada NewsKarnataka NewsLatest

*BREAKING: ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಪ್ರಕರಣ: ನಟಿ ಐಶ್ವರ್ಯಾ ಸೇರಿದಂತೆ 11 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಕನ್ನಡ ಖ್ಯಾತ ನಿರ್ದೇಶಕ ಅನಿಶ್ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಐಶ್ವರ್ಯಾ ಸೇರಿದಂತೆ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅನೀಶ್ ಅವರ ಕಾರು ಖರೀದಿಸುವುದಾಗಿ ಹೇಳಿ ಅವರನ್ನು ಕರೆಸಿಕೊಂಡಿದ್ದ ಗ್ಯಾಂಗ್ ಅನೀಶ್ ಅವರನ್ನು ಕಿಡ್ನ್ಯಾಪ್ ಮಾಡಿತ್ತು. ಇದೀಗ ಅಪಹರಣಕಾರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ನಟಿ ಐಶ್ವರ್ಯಾ ದುನಿಯಾ ವಿಜಯ್ ಅಭಿನಯದ ಭೀಮಾ ಚಿತ್ರದಲ್ಲಿ ನಟಿಸಿದ್ದಾರೆ. ನಟಿ ಕಂ ಮಾಡೆಲ್ ಆಗಿದ್ದು, ರೀಲ್ಸ್ ಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಈಗ ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.

ನಿರ್ದೇಶಕ ಅನೀಶ್ ಜೀವನ ಭಾಷೆ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾ ಅರ್ಧಕ್ಕೆ ನಿಲ್ಲಿಸಿ ಮುಂಬೈಗೆ ಹೋಗಿ ನೆಲೆಸಿದ್ದರು. ಈ ನಡುವೆ ತಮ್ಮ ಕಾರು ಮಾರಾಟ ಮಾಡುವುದಾಗಿ ಅನೀಶ್ ಹೇಳಿದ್ದರು. ನಿರ್ದೇಶಕನನ್ನು ಕಿಡ್ನ್ಯಾಪ್ ಮಾಡುವ ಪ್ಲಾನ್ ನಲ್ಲಿದ್ದ ನಟಿ ಐಶ್ವರ್ಯಾ ಹಾಗೂ ಗ್ಯಾಂಗ್ ಕಾರು ಖರೀದಿ ಮಾಡುವುದಾಗಿ ನಂಬಿಸಿ ಬೆಂಗಳೂರಿಗೆ ಕರೆಸಿಕೊಂಡಿದೆ.

Home add -Advt

ನಟಿಯ ಮಾತು ನಬಿ ಬೆಂಗಳೂರಿಗೆ ಕಾರು ಮಾರಾಟಕ್ಕೆ ಬಂದಿದ್ದ ಅನೀಶ್ ಅವರನ್ನು ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

Back to top button