Latest

ಹಿರಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ, ನಿರ್ಮಾಪಕ ಭಗವಾನ್ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

89 ವರ್ಷದ ಭಗವಾನ್ ಇತೀಚೆಗೆ ತೀವ್ರ ಶೀತದಿಂದ ಬಳಲುತ್ತಿದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.

ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಭಗವಾನ್ ಅವರನ್ನು ದಾಖಲಿಸಲಾಗಿದ್ದು, ಡಾ.ಮಂಜುನಾಥ್ ನೇತ್ಋತ್ವದ ವೈದ್ಯರ ತಂಡ ಚಿಕಿತ್ಸೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

1966ರಲ್ಲಿ ಸಂಧ್ಯಾರಾಗ ಸಿನಿಮಾ ಮೂಲಕ ಭಗವಾನ್ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ದೊರೈ ಅವರ ಜೊತೆ ಗೂಡಿ ಚಿತ್ರ ನಿರ್ದೇಶನ ಮಾಡುತ್ತಿದ್ದರು. ಇದರಿಂದಾಗಿ ದೊರೈ-ಭಗವಾನ್ ಜೋಡಿ ಕನ್ನದ ಚಿತ್ರರಂಗದಲ್ಲಿಯೇ ಜನಪ್ರಿಯ ನಿರ್ದೇಶಕ ಜೋಡಿಯಾಗಿ ಹೆಸರಾಗಿತ್ತು.

Home add -Advt

SSLC ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

https://pragati.taskdun.com/sslc-examfinal-time-tableannounce/

Related Articles

Back to top button