Latest

ಧ್ವಜಸ್ಥಂಭ ನಿಲ್ಲಿಸುವಾಗ ದುರ್ಘಟನೆ: ಬಾಲಕನ ಸಾವು

 ಪ್ರಗತಿವಾಹಿನಿ ಸುದ್ದಿ, ತುಮಕೂರು – ಶಾಲೆಯಲ್ಲಿ ಧ್ವಜಸ್ಥಂಭ ನಿಲ್ಲಿಸುವಾಗ ವಿದ್ಯುತ್ ಪ್ರವಹಿಸಿ ಬಾಲಕನೋರ್ವ ದುರ್ಮರಣಕ್ಕೀಡಾಗಿದ್ದಾನೆ.

ತುಮಕೂರು ಜಿಲ್ಲೆಯ ಕರಿಕೆರೆ ಎನ್ನುವ ಗ್ರಾಮದಲ್ಲಿನ ಶಾಲೆಯ ಧ್ವಜಾರೋಹಣಕ್ಕಾಗಿ ಮೂವರು ಮಕ್ಕಳು ಸೇರಿ ಧ್ವಜಸ್ಥಂಭ ನಿಲ್ಲಿಸುತ್ತಿದ್ದರು. ಈ ವೇಳೆ ಪಕ್ಕದಲ್ಲೇ ಇದ್ದ ವಿದ್ಯುತ್ ಲೈನ್ ನಿಂದ್ ವಿದ್ಯುತ್ ಪ್ರವಹಿಸಿದೆ. ಚಂದನ್ ಎನ್ನುವ 16 ವರ್ಷದ ಬಾಲಕ ಸಾವಿಗೀಡಾಗಿದ್ದು, ಇನ್ನಿಬ್ಬರು ಬಾಲಕರು ತೀವ್ರ ಗಾಯಗೊಂಡಿದ್ದಾರೆ.

ಈ ಬಾಲಕರು ಶಾಲೆಯಲ್ಲಿ ಓದುತ್ತಿರಲಿಲ್ಲ. ಆದರೆ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಧ್ವಜಸ್ಥಂಭ ನಿಲ್ಲಿಸಲು ಸಹಾಯ ಮಾಡುತ್ತಿದ್ದರು.

ಮೃತ ಬಾಲಕನ ಪಾಲಕರ ಆಕ್ರಂದನ ಮುಗಿಲುಮುಟ್ಟಿದೆ.

 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಷಣಕ್ಕೆ ಇಲ್ಲಿ ಕ್ಲಿಕ್ ಮಾಡಿ –

ಇಂದಿನಿಂದ ನವ ಕರ್ನಾಟಕ ನಿರ್ಮಾಣ ಆರಂಭ; ಹೊಸ ಯೋಜನೆ ಘೋಷಣೆ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button