
ಪ್ರಗತಿವಾಹಿನಿ ಸುದ್ದಿ, ಶಿರಸಿ – ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಶಿರಸಿ – ಕುಮಟಾ ರಸ್ತೆಯ ಹತ್ತರಗಿ ಕ್ರಾಸ್ ಬಳಿ ಕಾಡು ಕೋಣದ ಕೊಂಬನ್ನು ಅಕ್ರಮವಾಗಿ ಸಾಗಾಟ
ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಮಿವುಲ್ಲಾ ತಂದೆ ಅಬ್ದುಲ ರೆಹಮಾನ್ ಸಾಬ್ (ಪ್ರಾಯ : 29 ವರ್ಷ. ಸಾ\\
ಹೆಗಡೆಕಟ್ಟಾ ಮಸೀದಿ ಹತ್ತಿರ, ಹೆಗಡೆಕಟ್ಟಾ ಶಿರಸಿ) ಬಂಧಿತ. ಈತನನ್ನು ಬಂಧಿಸಿ 25000/- ರೂ ಮೌಲ್ಯದ ಕಾಡು ಕೋಣದ 2 ಕೊಂಬನ್ನು ವಶಪಡಿಸಿಕೊಂಡು ಈ ಬಗ್ಗೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ ಮಾರ್ಗದರ್ಶನದಲ್ಲಿ ಶಿರಸಿ ವೃತ್ತ ನಿರೀಕ್ಷಕ ಪ್ರದೀಪ
ಬಿ.ಯು ಹಾಗೂ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐಗಳಾದ ನಂಜಾನಾಯ್ಕ್,
ನಾಗೇಂದ್ರನಾಯ್ಕ್ ಮತ್ತು ಸಿಬ್ಬಂದಿಗಳಾದ ಪ್ರದೀಪ, ಮಂಜುನಾಥ ಪೂಜಾರಿ,
ಚೇತನ ಕುಮಾರ ಹೆಚ್ ಮತ್ತು ರಮೇಶ ಬೆಳಗಾಂವಕರ್ ಇವರ ತಂಡ ಕಾರ್ಯಾಚರಣೆ ನಡೆಸಿ
ಆರೋಪಿಯನ್ನು ಬಂಧಿಸಿ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊಂಬು ಎಲ್ಲಿಂದ ಬಂತು ಹಾಗೂ ಇದರಲ್ಲಿ ಭಾಗಿಯಾಗಿರುವ ಇತರೇ ವ್ಯಕ್ತಿಗಳ ಬಗ್ಗೆ ವಿಚಾರಣೆ ಪ್ರಗತಿಯಲ್ಲಿದೆ.