Kannada NewsKarnataka NewsLatest

*ದಯಾಮರಣ ಕೋರಿ ಸಿಎಂ, ರಾಷ್ಟ್ರಪತಿಗಳಿಗೆ ಪತ್ರ ಬರೆದ ಪೊಲಿಸ್ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ವಿವಿಧ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳು ದಯಾಮರಣಕ್ಕೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಹಲವು ವರ್ಷಗಳಿಂದ ವರ್ಗಾವಣೆ ಸಿಗದೇ ಬೇಸತ್ತಿರುವ ಪೊಲೀಸ್ ಸಿಬ್ಬಂದಿಗಳು ತಮಗೆ ವರ್ಗಾವಣೆ ನೀಡಿ ಇಲ್ಲವೇ ದಯಾಮರಣ ನೀಡಿ ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪೊಲೀಸ್ ಇಲಾಖೆಯ ಸಿಬ್ಬಂದಿಗಳ ಪತಿ ಒಂದು ಜಿಲ್ಲೆ, ಪತ್ನಿ ಒಂದು ಜಿಲ್ಲೆಯಲ್ಲಿ ಇರಬೇಕಾದ ಸ್ಥಿತಿ. ಇದರಿಂದ ಕೌಟುಂಬಿಕ ಸಮಸ್ಯೆಗಳು ಹೆಚ್ಚುತ್ತಿವೆ. ಕುಟುಂಬದ ಜೊತೆ ಕಾಲ ಕಳೆಯಲು ಸಮಯ ಸಿಗುತ್ತಿಲ್ಲ. ವಿಚ್ಛೇಧನ ಪ್ರಕರಣ ಹೆಚ್ಚುತ್ತಿದೆ. ಕೆಲ ಸಿಬ್ಬಂದಿಗಳಿಗೆ ವೃದ್ಧ ತಂದೆ-ತಾಯಿ ನೋಡಿಕೊಳ್ಳಬೇಕಿರುವ ಸ್ಥಿತಿಯಿದೆ. ಹೀಗಾಗಿ ವರ್ಗಾವಣೆ ನೀಡಿ. ಇಲ್ಲವಾದಲ್ಲಿ ದಯಾಮರಣ ನೀಡುವಂತೆ ಪೊಲೀಸ್ ಸಿಬ್ಬಂದಿಗಳು ಸಿಎಂ ಸಿದ್ದರಾಮಯ್ಯ ಹಾಗೂ ರಾಷ್ಟ್ರಪತಿಗಳಿಗೆ ಪತ್ರ ರವಾನಿಸಿದ್ದಾರೆ.


Home add -Advt

Related Articles

Back to top button