Latest

ಮೊದಲು ಮರಾಠಿಯಲ್ಲಿ ಬೋರ್ಡ್ ಬರೆಸಿ: ಅಂಗಡಿಕಾರರಿಗೆ ತಾಕೀತು

ಪ್ರಗತಿ ವಾಹಿನಿ ಸುದ್ದಿ ಮುಂಬೈ

ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿ ಸರಕಾರ ಬಂದ ಬಳಿಕ ಮರಾಠಿ ಭಾಷಾ ಪ್ರೇಮಕ್ಕೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಮುಂಬೈನ ಅಂಗಡಿಕಾರರಿಗೆ ಮರಾಠಿಯಲ್ಲಿ ಬೋರ್ಡ್ ಬರೆಸುವಂತೆ ಕಟ್ಟುನಿಟ್ಟಾದ ಆದೇಶ ಮಾಡಿದೆ.

ಅಂಗಡಿಗಳು, ಕಚೇರಿಗಳು, ವ್ಯಾಪಾರಿ ಮಳಿಗೆಗಳ ಬೋರ್ಡ್‌ಗಳು ಮೊದಲು ಮರಾಠಿಯಲ್ಲಿರಬೇಕು, ಆ ಬಳಿಕ ಕೆಳಗಡೆ ಬೇಕಿದ್ದರೆ ಇತರ ಭಾಷೆಗಳಲ್ಲಿ ಬರೆಸಿಕೊಳ್ಳಬಹುದು, ಆದರೆ ಬೋರ್ಡ್‌ಗಳಲ್ಲಿ ಮರಾಠಿ ಅಕ್ಷರಗಳು ದೊಡ್ಡದಾಗಿರಬೇಕು ಎಂದು ಬಿಎಂಸಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಅಲ್ಲದೇ ಪಾರಂಪರಿಕ ತಾಣಗಳು, ಐತಿಹಾಸಿಕ ವ್ಯಕ್ತಿಗಳ ಚಿತ್ರಗಳನ್ನು ಮದ್ಯದಂಗಡಿಗಳ ಬೋರ್ಡ್‌ಗಳಲ್ಲಿ ಬರೆಸುವಂತಿಲ್ಲ ಎಂದು ಸಹ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Home add -Advt

ನಯವಂಚಕರ ಬಂಡವಾಳ ಬಿಚ್ಚಿಡುತ್ತೇನೆ: ಗುಡುಗಿದ ನಿವೃತ್ತ ಐಪಿಎಸ್ ಭಾಸ್ಕರ್ ರಾವ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button