Kannada NewsKarnataka NewsLatest

ಸ್ವಾವಲಂಬನಕ್ಕಾಗಿ ವಿದ್ಯಾರ್ಥಿಗಳಿಗೆ ಬೈಕ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಅಥಣಿ: ನಿರುದ್ಯೋಗಿ ವಿದ್ಯಾರ್ಥಿಗಳನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲೆಮಾರಿ 20 ವಿದ್ಯಾರ್ಥಿಗಳಿಗೆ ಬೈಕ್ ಗಳನ್ನು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಯುಗಾದಿ ನಿಮಿತ್ತ ವಿತರಿಸಿದರು.

ನಂತರ ಮಾತನಾಡಿದ ಅವರು, ಸ್ವಾವಲಂಬನವಿಲ್ಲದ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಟಿಸಿ ಮೋಟಾರ್ ಬೈಕ್ ನೀಡಲಾಗಿದೆ. ಇವುಗಳನ್ನು ಉಪಯೋಗಿಸಿಕೊಂಡು ಒಂದೇ ಫೋನ್ ಕರೆಗೆ, ಹೋಟೆಲ್ ತಿಂಡಿ,ಆಹಾರ ಸಾಮಗ್ರಿಗಳನ್ನು ಅವರ ಮನೆಗೆ ತಲುಪಿಸುವ ಮುಖಾಂತರ ಸ್ವಯಂ ಉದ್ಯೋಗದ ಜೊತೆಗೆ ಆದಾಯ ಮಾಡಿಕೊಳ್ಳಬಹುದು ಎಂದರು.

“ಇಂಥ ಸೇವೆಗೆ ತಾಲೂಕಿನಿಂದ 40 ಜನರನ್ನು ಆಯ್ಕೆ ಮಾಡಿ ಮೊದಲ ಹಂತದಲ್ಲಿ 20 ಜನರಿಗೆ ಮಾತ್ರ ಬೈಕ್ ವಿತರಿಸಲಾಗುತ್ತಿದೆ ಈ ಹೊಸ ಯೋಜನೆಯನ್ನು ಸರಕಾರ ಜಾರಿಗೆ ತಂದಿದ್ದು ಒಟ್ಟು ಅಥಣಿ ಕ್ಷೇತ್ರಕ್ಕೆ ಕನಿಷ್ಠ ಪಕ್ಷ 500 ನಿರುದ್ಯೋಗಗಳಿಗೆ ಬೈಕ್ ಕೊಡುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಸಚಿವರಿಗೆ ಮನವಿ ಮಾಡಿದ್ದು ಯುವಕರು ಸೌಲಭ್ಯದ ಪ್ರಯೋಜನ ಪಡೆಯಬೇಕು” ಎಂದರು.

“ರಾಘವೇಂದ್ರ ಮಠದ ರಸ್ತೆಗೆ ಸರಕಾರ 2 ಕೋಟಿ ರೂ. ವಿಶೇಷ ಅನುದಾನದಡಿ ಸಿಸಿ ರಸ್ತೆ ನಿರ್ಮಾಣ ಮತ್ತು 50 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಕಂಬಗಳು, ಲೈಟ್ ವ್ಯವಸ್ಥೆಗೆ ಸಚಿವ ಮಿತ್ರರಾದ ಎಂಟಿಬಿ ನಾಗರಾಜ ಸಹಕಾರದಿಂದ ಸಾಧ್ಯವಾಗಿದೆ ಇದರಿಂದ ತಾಲೂಕಿನ ಜನತೆ ಅಷ್ಟೇ ಅಲ್ಲ ಅಕ್ಕ ಪಕ್ಕದ ತಾಲೂಕಿನ ಜನತೆಯು ಸಹ ಮಠಕ್ಕೆ ಬರುವದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ” ಎಂದರು.

ಆರೆಸ್ಸ್ಸೆಸ್ ಮುಖಂಡ ಅರವಿಂದರಾವ ದೇಶಪಾಂಡೆ, ತಮ್ಮಣ್ಣ ಹುಲಕುಂದ,ಶಿವರುದ್ರ ಗೂಳಪ್ಪನವರ, ಸುಶೀಲ ಪತ್ತಾರ, ರಾಜು ಅಳಬಾಳ, ಅಮರ ದುರ್ಗಣ್ಣನವರ, ರಾಜು ಚೌಗಲಾ, ಶ್ರೀಶೈಲ ನಾಯಕ, ಸಂಗಮೇಶ ಪಲ್ಲಕ್ಕಿ, ಪ್ರದೀಪ ನಂದಗಾಂವ, ಲೋಕೇಶ್ ಪಾಟೀಲ್, ಅಸಿಫ್ ತಾಂಬೋಳಿ, ಅರುಣ ಭಾಸಿಂಗಿ, ರಾಜು ಬುಲಬುಲೆ, ಮಲ್ಲು ಹುದ್ದಾರ, ದತ್ತಾ ವಾಸ್ಟರ, ಆನಂದ ಮಾದಗುಡಿ ಮತ್ತಿತರರಿದ್ದರು.

https://pragati.taskdun.com/piranawadi-checkpost2-89-lakhfoundbelagavi/

https://pragati.taskdun.com/covid-caseincrease1134-new-caseindia/
https://pragati.taskdun.com/belagavi13-lakhseizedmarket-police/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button