Kannada NewsKarnataka News

ಸಂಘಪರಿವಾರದಿಂದ ಲಮಾಣಿ ಬಂಜಾರಾ ಸಮಾಜದ ಬಡವರಿಗೆ ಆಹಾರ ಸಾಮಗ್ರಿ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವ ಹಿಂದೂ ಪರಿಷತ್ , ಆರ್ ಎಸ್ ಎಸ್ ಮತ್ತು ಸೇವಾ ಭಾರತಿ ವತಿಯಿಂದ   ಕೊರೋನ ಮಹಾ ಮಾರಿಯ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಆಹಾರ ಸಾಮಗ್ರಿಗಳ ಕಿಟ್ ಹಂಚಿಕೆ ಮುಂದುವರಿದಿದೆ.

ಬೇರೆ ಬೇರೆ ಸಮಾಜದ ಅಸಹಾಯಕರು, ದಿನಗೂಲಿ ಮಾಡುವವರು, ಮನೆಗೆಲಸ ಮಾಡುವ ಬಡ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ದೇವೇಂದ್ರ ನಾಯ್ಕ ಮುಖಾಂತರ ಲಮಾಣಿ ಬಂಜಾರಾ ಸಮಾಜದ ಅವಶ್ಯಕತೆ ಇರುವ ಬಡ 10 ಕುಟುಂಬಗಳಿಗೆ ಆಹಾರ ಸಾಮಗ್ರಿಗಳನ್ನು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ನೀಡಿದರು.

ವಿಶೇಷವೆಂದರೆ, ವಿಶ್ವ ಹಿಂದೂ ಪರಿಷತ್ , ಆರ್ ಎಸ್ ಎಸ್ ಮತ್ತು ಸೇವಾ ಭಾರತಿ ಕಾರ್ಯದಿಂದ  ಪ್ರೇರಿತರಾದ   ದೇವೇಂದ್ರ ನಾಯ್ಕ ಅವರ ಕುಟುಂಬದವರು ಸುಮಾರು 15 ಕುಟುಂಬಕ್ಕೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ನೀಡಿತು.

ಈ ವೇಳೆ ಮಾತನಾಡಿದ ವಿಶ್ವಹಿಂದೂ ಪರಿಷತ್ ಪ್ರಮುಖ ಕೃಷ್ಣ ಭಟ್ ಮಾತನಾಡುತ್ತ, ಎಲ್ಲ ಸಮಾಜದವರು ಕೈ ಜೋಡಿಸಿದರೆ ಈ ಪುಣ್ಯ ಕಾರ್ಯವನ್ನು ನೋಡುತ್ತಾ ಇರುವ  ಆ ಪರಮಾತ್ಮನೂ ನಮಗೆ ಸಹಾಯ ಮಾಡುತ್ತಾನೆ. ನರರಲ್ಲಿ ನಾರಾಯಣನನ್ನು ಕಾಣು ಎನ್ನುವ ಸ್ವಾಮೀ ವಿವೇಕಾನಂದರ ವಾಣಿಯನ್ನು ದೇವೇಂದ್ರ ನಾಯ್ಕ ಕುಟುಂಬ ಮತ್ತು ಲಮಾಣಿ ಬಂಜಾರಾ ಸಮಾಜ  ಅಕ್ಷರಶಃ ಮಾಡಿ ತೋರಿಸಿದೆ ಎಂದರು.

ನಮಗೆ ಇನ್ನೂ ಹೆಚ್ಚು ಕೆಲಸ ಮಾಡುವ ಪ್ರೇರಣೆ ಸಿಕ್ಕಿದೆ. ಅವಶ್ಯಕತೆ ಇರುವ ಕುಟುಂಬ ಗುರುತಿಸಿ ನಾವೂ ಮತ್ತೆ ಕೈ ಜೋಡಿಸುತ್ತೇವೆ  ಎಂದರು.

ನಂತರ ದೇವೇಂದ್ರ ನಾಯ್ಕ ಮಾತನಾಡುತ್ತಾ, ತಮ್ಮ ಕುಟುಂಬದಿಂದ ಸುಮಾರು  15 ದಿವಸ ಸಾಕಾಗುವಷ್ಟು ಆಹಾರ ಸಾಮಗ್ರಿಗಳ ಕಿಟ್  ಕೊಡಲು ಸಂಕಲ್ಪ ಮಾಡುವದರೊಂದಗೆ ಸುತ್ತ ಮುತ್ತ ಇರುವ ಬೇರೆ ಬೇರೆ  ಸಮಾಜದ , 50 ಬಡ   ಕುಟುಂಬಕ್ಕೆ ಲಮಾಣಿ ಬಂಜಾರಾ ಸಮಾಜದ ಆರ್ಥಿಕವಾಗಿ ಸದೃಢವಾಗಿರುವ ಬಂಧುಗಳನ್ನು ಜೋಡಿಸಿಕೊಂಡು  ಆಹಾರ ಸಾಮಗ್ರಿಗಳನ್ನು ಕೊಡುವ ನಿಶ್ಚಯ ಮಾಡಿದರು.

ಕ್ರೀಡಾ ಭಾರತಿ ಪ್ರಾಂತ  ಪ್ರಮುಖ ಅಶೋಕ ಶಿಂತ್ರೆ, ವಿದ್ಯಾ ಭಾರತಿ ಪ್ರಾಂತ  ಪ್ರಮುಖ ಪರಮೇಶ್ವರ ಹೆಗಡೆ, ಮಠ ಮಂದಿರ ಪ್ರಮುಖ ಸತೀಶ ಮಾಳವದೆ,  ಜಯದೇವಯ್ಯ ಹಿರೇಮಠ, ಕೃಷ್ಣ ಭಟ್ ಇದ್ದರು.

ಬಡ ಕುಟುಂಬದ  ತಾಯಂದರಿಗೆ ಕಿಟ್ ಹಸ್ತಾಂತರಿಸಿದ ದೇವೇಂದ್ರ  ನಾಯ್ಕ ಕುಟುಂಬಕ್ಕೆ, ಬಂಜಾರಾ ಸಮಾಜದ ಎಲ್ಲರಿಗೆ ಸತೀಶ ಮಾಲವದೆ ಧನ್ಯವಾದ ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button