ನಿರಾಶ್ರಿತರಿಗೆ ಗ್ಯಾಸ್ ಒಲೆ ವಿತರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇತ್ತೀಚೆಗೆ ಭಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿ ಅಪಾಯ ಮಟ್ಟಕ್ಕಿಂತಲೂ ಹೆಚ್ಚಿಗೆ ಪ್ರವಾಹ ಬಂದು ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಮ್ಮಾ ದೇವಸ್ಥಾನದ ಆವರಣದಲ್ಲಿಯ ಸುಮಾರು 60 ಮನೆಗಳು ಮುಳುಗಡೆ ಹೊಂದಿದ್ದವು. ಇಡಿ ಕುಟುಂಬಗಳು ಬಿದಿಪಾಲಾಗಿವೆ. ಈಗ ಹೊಳೆಮ್ಮಾ ದೇವಸ್ಥಾನದ ಆಶ್ರಯ ಪಡೆದು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಹುಕ್ಕೇರಿ ಚಂದ್ರಶೇಖರ ಮಹಾಸ್ವಾಮಿಗಳ ಶಿಷ್ಯರಾದ ಬೆಂಗಳೂರಿನ ಹುಕ್ಕೇರೀಶ ಬಳಗದ ಸದಸ್ಯ ಬಸವರಾಜ ಮತ್ತು ಚಲನ ಚಿತ್ರ ನಟ, ನಿರ್ಮಾಪಕ ರಾಧಾಕೃಷ್ಣ ಪಲ್ಲಕ್ಕಿ ಯವರು ಸುಮಾರು 60 ಗ್ಯಾಸ್ ಒಲೆಗಳನ್ನು ನಿರಾಶ್ರಿತರಿಗೆ ನೀಡುವ ಮೂಲಕ ಅವರ ಬದುಕು ಬೆಳಗಲು ಸಹಾಯ ಹಸ್ತ ನೀಡಿದರು.
ಬಡಕುಂದ್ರಿ ಹೊಳೆಮ್ಮಾ ದೇವಸ್ಥಾನದ ಆವರಣದಲ್ಲಿ ಜರುಗಿದ ಸಮಾರಂಭದಲ್ಲಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ, ಬಡಕುಂದ್ರಿ ಗ್ರಾಮದ ಸುಮಾರು 60 ಕುಟುಂಬಗಳು ಸಂಪೂರ್ಣ ಮನೆ ಕಳೆದುಕೊಂಡಿದ್ದಾರೆ. ಇವರ ಕಷ್ಟವನ್ನು ಅರಿತು ಸರ್ಕಾರ ಕೂಡಲೆ ಹೊಸ ಬದುಕು ಕಟ್ಟಿಕೊಳ್ಳಲು ಪರ್ಯಾಯವಾಗಿ ಶಾಶ್ವತವಾದ ಮನೆಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೊಳೆಮ್ಮಾ ದೇವಿ ಟ್ರಸ್ಟ್ ಕಮಿಟಿ ಸದಸ್ಯರಾದ ಎಚ್ ಎಲ್ ಪೂಜೇರಿ, ಎಲ್ ಎಚ್ ಗುಡಾಸಿ, ಚಿದಾನಂದ ಮಾನಗಾಂವಿ , ಲಕ್ಕಪ್ಪಾ ಪೂಜೇರಿ, ಬಾಬುಗೌಡಾ ಪಾಟೀಲ, ಮಾರುತಿ ಮಾನಗಾಂವಿ, ಪರಪ್ಪಾ ಗಂಡ್ರೋಳಿ, ನಿಂಗಪ್ಪಾ ಪರೀಟ, ಸಿದ್ದು ಮಾನಗಾಂವಿ, ಹಾಗೂ ನಿರಾಶ್ರಿತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ