Kannada NewsKarnataka NewsLatest

ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಹೋಂ ಐಸೋಲೇಶನ್ ಕಿಟ್ ವಿತರಣೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಬೆಳಗಾವಿ ಗ್ರಾಮೀಣ ಕ್ಷೇತ್ರದ ನರ ಆರೋಗ್ಯದ ದೃಷ್ಟಿಯಿಂದ ಹಾಗೂ ಕೊರೋನಾ ಸೋಂಕಿನ ಸರಪಳಿಯನ್ನು ಕತ್ತರಿಸಿ ಕೊರೋನಾ ಮುಕ್ತವನ್ನಾಗಿಸಲು ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕೋವಿಡ್ ಹೋಮ್ ಐಸೋಲೇಷನ್ ಕಿಟ್ ಗಳನ್ನು ವಿತರಿಸಲು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮುಂದಾಗಿದ್ದಾರೆ.
 
ಈ ಹಿನ್ನೆಲೆಯಲ್ಲಿ ಕಿಟ್ ತಯಾರಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ಒಂದೆರಡು ದಿನದಲ್ಲಿ ಪ್ರತಿ ಮನೆಗೆ ವಿತರಣೆ ನಡೆಯಲಿದೆ. ಇದರ ಜೊತೆಯಲ್ಲಿ ಜನರಿಗೆ ಕೆಲವು ಸಲಹೆಗಳನ್ನೂ ಹೆಬ್ಬಾಳಕರ್ ನೀಡಿದ್ದಾರೆ. ಪ್ರಮುಖ ಸಲಹೆಗಳು ಹೀಗಿವೆ –
✔️  ಕೊರೋನಾ ಬಗ್ಗೆ ಯಾರೂ ಹೆದರದೇ ನಾಗರಿಕರೆಲ್ಲರು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಲಸಿಕೆಗಳನ್ನು (ವ್ಯಾಕ್ಸಿನ್) ಹಾಕಿಸಿಕೊಳ್ಳುವ ಮುಖೇನ ಕೊರೋನಾವನ್ನು ತಡೆಗಟ್ಟಬೇಕು.
✔️  ಯಾರಿಗಾದರೂ ಸೋಂಕಿನ ಲಕ್ಷಣಗಳು ಕಂಡು ಬಂದರೆ ಕೊಡಲೇ ಹತ್ತಿರದ ಪ್ರಾರ್ಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ಕೊಟ್ಟು ತಪಾಸಣೆ ಮಾಡಿಸಿಕೊಳ್ಳಬೇಕು.
✔️   ಅನಗತ್ಯವಾಗಿ ಯಾರೊಬ್ಬರೂ ಹೊರಗಡೆ ಬರಬರದು. ನಿಮ್ಮ ಕುಟುಂಬಸ್ಥರ ಆರೋಗ್ಯ ನಿಮ್ಮ ಮೇಲಿರುವ ಕಾರಣ ಎಚ್ಚೆತ್ತುಕೊಳ್ಳಬೇಕು..
✔️ ಅನಗತ್ಯವಾಗಿ ಮಕ್ಕಳನ್ನು ಇತರ ಆಟದ ಸ್ಥಳಗಳಿಗೆ ಕರೆದೊಯ್ಯಬಾರದು.
✔️ ಎದೆಹಾಲು ಕುಡಿಸುವ ತಾಯಂದಿರು ಕೂಡ ಹೊರಗೆ ಹೋಗಬಾರದು.
✔️ ಮಕ್ಕಳೊಂದಿಗೆ ಕುಟುಂಬ ಭೇಟಿ, ಔತಣಕೂಟಗಳನ್ನು ಆದಷ್ಟು ತಪ್ಪಿಸಬೇಕು.
✔️ ಅನಗತ್ಯವಾಗಿ ತಂದೆಯ ಮನೆ, ತಾಯಿಯ ಮನೆ, ಇತರ ಸಂಬಂಧಿಕರ ಮನೆಗಳಿಗೆ ಕೂಡ ಹೋಗದೆ ಎಚ್ಚರವಹಿಸಬೇಕು.
 ✔️ ಚಿಕ್ಕ ಶಿಶುಗಳನ್ನು ತೆಗೆದುಕೊಳ್ಳಲು ಅಥವಾ ಮುದ್ದಿಸಲು ಇತರರನ್ನು ಅನುಮತಿಸಬಾರದು.
✔️  ಚಿಕ್ಕ ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತವಹಿಸಬೇಕು. ಆಗಾಗ ಮಕ್ಕಳ ಕೈಗಳನ್ನು ತೊಳೆಯಬೇಕು.
✔️ ನಿಮಗೆ ಯಾವುದೇ ಕಾಯಿಲೆ ಇದ್ದರೆ, ಹತ್ತಿರದ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮಾಡಿಸಿ, ಹೆಚ್ಚಿನ ಚಿಕಿತ್ಸೆಯನ್ನು ಸೂಚಿಸಿದರೆ ಮಾತ್ರ ಬೇರೆ ಆಸ್ಪತ್ರೆಗೆ ಹೋಗಬೇಕು.
✔️ ಮಕ್ಕಳ ಸಂಬಂಧಿತ ಎಲ್ಲಾ ಆಚರಣೆಗಳಾದ ಜವಳ ತೆಗೆಯುವಿಕೆ ಮತ್ತು ನಾಮಕರಣವನ್ನು ಮುಂದೂಡಿ.
✔️ ಮಕ್ಕಳ ಆಹಾರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇರಿಸಿ. 
✔️ ನೆರೆಹೊರೆಯ ಮನೆಗಳಲ್ಲಿ ಸಹ ಮಕ್ಕಳನ್ನು ಆಟವಾಡಲು ಬಿಡಬೇಡಿ.
✔️ ಹೊರಗಿನಿಂದ ಬಂದವರ ಸಂಪರ್ಕವನ್ನು ಆದಷ್ಟು ಮಕ್ಕಳಿಂದ ತಪ್ಪಿಸಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button