Kannada NewsLatest

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯದ  ಕುಲಪತಿ ಡಾ. ವಿದ್ಯಾಶಂಕರ ಎಸ್. ಅವರು ಇಲ್ಲಿನ ವಿತಾವಿ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅನುಸೂಚಿತ ಜಾತಿ/ ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.

ನಂತರ ಮಾತನಾಡಿದ ಅವರು, ವಿಶ್ವೇಶ್ವರಯ್ಯತಾಂತ್ರಿಕ ವಿಶ್ವವಿದ್ಯಾಲಯ  ನೀಡುತ್ತಿರುವ ಈ ಸವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಹಾಗೂ ಸ್ನಾತಕ/ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸಮಾರಂಭದಲ್ಲಿ ವಿವಿ ಕುಲಸಚಿವ  (ಮೌಲ್ಯಮಾಪನ) ಡಾ. ಟಿ. ಎನ್. ಶ್ರೀನಿವಾಸ,  ಹಾಜರಿದ್ದರು. ಅನುಸೂಚಿತಜಾತಿ/ಅನುಸೂಚಿತ ಪಂಗಡ ಮತ್ತು ಇತರ  ಹಿಂದುಳಿದ ಘಟಕದ  ಲೈಜನ್‌ ಆಫೀಸರ್,ಡಾ. ಪ್ರಹ್ಲಾದ್‌ ರಾಠೋಡ್  ಸಮಾರಂಭವನ್ನು ನಡೆಸಿಕೊಟ್ಟರು.

ಎಂಬಿಎ ವಿಭಾಗದ, ಸಂಶೋಧನಾ ವಿದ್ಯಾರ್ಥಿನಿ ಮಿಲಾಗ್ರೇನ್ ಮೇರಿ ನಿರೂಪಿಸಿದರು.

ವಿಶ್ವವಿದ್ಯಾಲಯದ ಎಸ್.ಸಿ.ಎಸ್.ಪಿ./ಟಿ.ಎಸ್.ಪಿ. ಯೋಜನೆಗಳಡಿ ವಿತಾವಿ ಬೆಳಗಾವಿ ಹಾಗೂ ಇತರ ಸ್ನಾತಕೋತ್ತರ ಕೇಂದ್ರಗಳಾದ ಮೈಸೂರು, ಮುದ್ದೇನಹಳ್ಳಿ, ಕಲಬುರ್ಗಿ ಮತ್ತು ದಾವಣಗೆರೆಯಲ್ಲಿರುವ ವಿವಿಯ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಪದವಿಯಲ್ಲಿ ಮತ್ತು ಎಂಸಿಎ (ಲ್ಯಾಟರಲ್)ನ ಒಟ್ಟು208 ಅನುಸೂಚಿತ ಜಾತಿ/ಪಂಗಡಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ಖರೀದಿಸಿ ಪ್ರತಿ ವರ್ಷ ಪೂರೈಕೆ ಮಾಡಲಾಗುತ್ತಿದೆ.

ಮಹಿಳೆ ಈಗ ಸರ್ವ ಕ್ಷೇತ್ರಗಳಲ್ಲೂ ಸಬಲೆ: ಸಚಿವೆ ಶಶಿಕಲಾ ಜೊಲ್ಲೆ  

https://pragati.taskdun.com/women-are-now-strong-in-all-fields-minister-shashikala-jolla/

ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಲಿ: ಕೇಂದ್ರ ಸರ್ಕಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ

https://pragati.taskdun.com/central-exams-should-be-held-in-kannada-mla-balachandra-jarakiholi-appeals-to-the-central-government/

ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮನ್ವಯದ ಕಾರ್ಯವಾಗಲಿ: ಕೆ.ನಾಗಣ್ಣಗೌಡ

https://pragati.taskdun.com/conciliation-should-be-done-to-bring-children-in-legal-conflict-into-the-mainstream-k-naganna-gowda/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button