ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಪ್ರಯತ್ನ ಸಂಘಟನೆ ವತಿಯಿಂದ ಶುಕ್ರವಾರ ಪಾರ್ವತಿ ನಗರದ ಕಿಡ್ಸ್ ಲ್ಯಾಂಡ್ ಶಾಲೆಯ ಮಕ್ಕಳಿಗೆ ವಿವಿಧ ಕಲಿಕೆ ಹಾಗೂ ಆಟಿಗೆ ಪರಿಕರಗಳನ್ನು ವಿತರಿಸಲಾಯಿತು.
ಆರ್ಥಿಕವಾಗಿ ಹಿಂದುಳಿದಿರುವ ಇಲ್ಲಿನ ಮಕ್ಕಳಿಗೆ ಸ್ಕೂಲ್ ಬ್ಯಾಗ್, ವಾಟರ್ ಬ್ಯಾಗ್, ಕುರ್ಚಿ, ಆಟಿಕೆ ಸಾಮಾನುಗಳು ಹಾಗೂ ತಿಂಡಿ ತಿನಸುಗಳನ್ನು ನೀಡಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಪ್ರಮುಖ ರವಿಕಾಂತ್ ಕೆ. ಎನ್., .ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ, ವೆಂಕಟೇಶ ಸರ್ನೋಬತ್, ಗೌರಿ ಸರ್ನೋಬತ್, ಬೀನಾ ರಾವ್, ವರದಾ ಭಟ್, ಸುನೀತಾ ಭಟ್, ಪದ್ಮಾ ವೆರ್ಣೇಕರ್, ಪ್ರಿಯಾಂಕ ಹಾಗೂ ಪ್ರತೀಕ್ಷಾ ಕಾರಜೋಳ, ಶಾಲೆಯ ಸಂಸ್ಥಾಪಕರಾದ ವೀಣಾ ದೇಶಪಾಂಡೆ ಹಾಗೂ ಶ್ರೀಕಾಂತ್ ದೇಶಪಾಂಡೆ ಉಪಸ್ಥಿತರಿದ್ದರು.
ಪವಿತ್ರಾ ಕುರ್ತಕೋಟಿಗೆ ಮುಖ್ಯಮಂತ್ರಿಗಳಿಂದ ಸೈಕಲ್ ಪ್ರದಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ