Kannada NewsKarnataka NewsUncategorized

ಮೋದಿ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ಹಣ ಹಂಚಿಕೆ: ಶಾಸಕ ಪಿ.ರಾಜೀವ ಸೇರಿ ಇಬ್ಬರು ವಿರುದ್ಧ ಪ್ರಕರಣ ದಾಖಲು

ನೀತಿಸಂಹಿತೆ ಉಲ್ಲಂಘನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕುಡಚಿ ಮತಕ್ಷೇತ್ರದಲ್ಲಿ ಏ.29 ರಂದು ನಡೆದ ಬಿಜೆಪಿ ಸಮಾವೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಜನರನ್ನು ಸೇರಿಸಲು ಹಣ ಹಂಚಿಕೆ ಮಾಡಿ ಆಮಿಷ ತೋರಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಪಿ.ರಾಜೀವ ಸೇರಿದಂತೆ ಇಬ್ಬರ ವಿರುದ್ಧ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಪಕ್ಷದ ಬಹಿರಂಗ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವ ಉದ್ಧೇಶದಿಂದ ಮುಗಳಖೋಡ ಪಟ್ಟಣದ ಬಳಿ ಏ.29 ರಂದು ಹಣ ಹಂಚಿಕೆ ಮಾಡಿ ಆಮಿಷ ತೋರಿಸಲಾಗಿದೆ ಎಂದು ಖಾಸಗಿ ಟಿವಿ ವರದಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿನ ಪ್ರತಿಕ್ರಿಯೆ ಆಧರಿಸಿ ದೂರು ನೀಡಲಾಗಿದೆ.

Home add -Advt

ಪ್ರಕರಣಕ್ಕೆ ಸಂಬಂಧಿಸಿದಂತೆ ಕುಡಚಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜೀವ್ ಹಾಗೂ ಮುಗಳಖೋಡದ ಹಾಲಪ್ಪ ಹನಮಂತ ಶೇಗುಣಸಿ ಎಂಬುವರ ವಿರುದ್ಧ ಸರಕಾರಿ ಅಧಿಕಾರಿ ಅಭಿಷೇಕ್ ಪಾಂಡೆ ಅವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಭಾನುವಾರ (ಏ.30) ದೂರು ನೀಡಿದ್ದಾರೆ.

https://pragati.taskdun.com/vidhanasabha-electionvijayapurajdscandidatecongress-supportyatnal/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button