Kannada NewsKarnataka NewsLatest

​ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ವಿವಿಧ ಕಿಟ್ ಗಳ ವಿತರಣೆ​

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ​ ಬೆಳಗಾವಿಯ ಜಿಲ್ಲಾಸ್ಪತ್ರೆಯ ರೋಗಿಗಳಿಗೆ​ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಆಹಾರದ ಪ್ಯಾಕೇಟ್ ಹಾಗೂ ನೀರಿನ ಬಾಟಲ್ ಗಳನ್ನು ವಿತರಿಸಲಾಯಿತು.
ಕೊರೋನಾ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಲಕ್ಷ್ಮೀ ತಾಯಿ ಫೌಂಡೇಷನ್ ಮೂಲಕ​ ಈಗಾಗಲೆ 2 ಅಂಬುಲೆನ್ಸ್ ಸೇವೆಯನ್ನು ವ್ಯವಸ್ಥೆ ಮಾಡಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇದೀಗ,​ ಸಾಮಾಜಿಕ ಕಳಕಳಿಯ ದೃಷ್ಟಿಯಿಂದ ಆಹಾರದ ಪ್ಯಾಕೇಟ್, ನೀರಿನ ಬಾಟಲ್ ಗಳು, ಮಾತ್ರೆಯ ಕಿಟ್ ಗಳು, ಮಾಸ್ಕ್ ಹಾಗೂ ಇನ್ನಿತರ ವಸ್ತುಗಳನ್ನು ವಿತರಿ​ಸುವ ಕೆಲಸ ಮಾಡಿದ್ದಾರೆ.
​ ಕೊರೋನಾ ಮಹಾಮಾರಿಯಿಂದ ತತ್ತರಿಸಿದ ಜನರಿಗೆ ​ಎಲ್ಲರೂ​ ಕೈಲಾದಷ್ಟು ಸಹಾಯವನ್ನು ಮಾ​ಡಬೇಕು. ​ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸ್ಯಾನಿಟೈಜರ್, ಹ್ಯಾಂಡ್ ಗ್ಲೋವ್ಸ್, ಮಾಸ್ಕ್ ಮುಂತಾದ ಸುರಕ್ಷಿತ ವಸ್ತುಗಳನ್ನು ಬಳಿಸುವ ​ಮೂಲಕ ಕೊರೋನಾ ರೋಗ​ವನ್ನು ಹೊಡೆದೋಡಿಸಬೇಕು. 
​ ಅನಗತ್ಯವಾಗಿ ಮನೆಯಿಂದ ಹೊರಗೆ ಬಾರದಿರುವ ಮೂಲಕ ನಿಮ್ಮ ಹಾಗೂ ನಿಮ್ಮ ಮನೆಯವರ ಸುರಕ್ಷತೆಯನ್ನು ಕಾಪಾಡಿ​ ಎಂದು ಲಕ್ಷ್ಮಿ ಹೆಬ್ಬಾಳಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button