Kannada NewsKarnataka News

ಬೈಲಹೊಂಗಲ: ಕೊರೋನಾ ರೋಗಿಗಳಿಗೆ ಅವಶ್ಯಕ ಮಾತ್ರೆಗಳ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ – ಕರೋನಾ ಸಮಯದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿರು ಬಿಜೆಪಿ ಹಿರಿಯ ನಾಯಕ,  ಬೈಲಹೊಂಗಲ ಮತಕ್ಷೇತ್ರದ ಮಾಜಿ ಶಾಸಕ ಜಗದೀಶ್ ಮೆಟಗುಡ್, ಕೋವಿಡ್ 2ನೇ ಅಲೆಯ ತಿವ್ರತೆಯನ್ನು ಮನಗಂಡು ಕರೋನಾ ರೋಗಿಗಳಿಗೆ ಅವಶ್ಯಕವಾಗಿರುವ ಮಾತ್ರೆಗಳ 2500 ಕಿಟ್ ಗಳನ್ನು ಹಂಚಿದ್ದಾರೆ.

ಕೋವಿಡ್ ಸೊಂಕು ಕಂಡುಬರುವಂತಹ ಜನರಿಗೆ ಉಚಿತವಾಗಿ ಹಳ್ಳಿಗಳಲ್ಲಿರುವ ವೈದ್ಯರ ಮೂಲಕ ಮಾತ್ರೆಗಳನ್ನು  ತಲುಪಿಸುವ ಕಾರ್ಯ ಕ್ಷೇತ್ರದಲ್ಲಿ ನಡೆಯುತ್ತಿದೆ. ಈ ಕಾರ್ಯಕ್ಕೆ ಯುವ ಉದ್ಯಮಿ  ವಿಜಯ್ ಮೆಟಗುಡ್  ಸಾತ್ ನೀಡಿ ಜನರ ರಕ್ಷಣೆ ನಮ್ಮ ಜವಾಬ್ದಾರಿ, ನಮ್ಮ ಕುಟುಂಬ ಸದಾ ಜನಸೇವೆಗೆ ಸಿದ್ದ ಎಂದರು.

Home add -Advt

ಇದೇ ಸಂದರ್ಭದಲ್ಲಿ ಮಾತನಾಡಿದ ಜಗದೀಶ ಮೆಟಗುಡ್ ಅವರು, ಸರಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿ, ಮಾಸ್ಕ್ ಬಳಸಿ, ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬೇಡಿ, ಕ್ಷೇತ್ರದ ಜನತೆ ಭಾರತೀಯ ಜನತಾ ಪಕ್ಷದ ಮೇಲೆ ಹಾಗೂ ನಮ್ಮ ಕುಟುಂಬದ ಮೇಲೆ ಇಟ್ಟಿರುವ ನಂಬಿಕೆಗೆ ಇದು ನಮ್ಮ ಒಂದು ಅಳಿಲು ಸೇವೆ, ಯಾವುದೆ ವದಂತಿಗಳಿಗೆ ಕಿವಿ ಕೊಡಬೇಡಿ. ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದೆ, ಶ್ರೀರಾಮನ ಕೃಪಾಶಿರ್ವಾದದಿಂದ ಕರೋನಾ ಮುಕ್ತವಾಗಲಿ ಎಂದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ, ಪುರಸಭೆ ಸದಸ್ಯ ಗುರು ಮೆಟಗುಡ್, ಸಹಕಾರ ಪ್ರಕೋಷ್ಟ ಜಿಲ್ಲಾ ಸಂಚಾಲಕ ಸುನೀಲ ಮರಕುಂಬಿ, ಯುವ ಉದ್ಯಮಿ ಜಯರಾಜ ಮೆಟಗುಡ್, ಪ್ರಪುಲ್ ಪಾಟೀಲ್, ಪ್ರಶಾಂತ ಅಮ್ಮಿನಭಾವಿ, ಓಬಿಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸಂತೋಷ ಹಡಪದ ಹಾಗೂ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಕಿಟ್ ವಿತರಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.

ಹರ್ಷ ಶುಗರ್ಸ್ ವತಿಯಿಂದ 40 ಆಕ್ಸಿಜನ್ ಸಿಲಿಂಡರ್ ವಿತರಣೆ

Related Articles

Back to top button