Kannada NewsKarnataka News

178 ಜನರ ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತ; ಬೆಳಗಾವಿ ಈಗ ಹಾಟ್ ಸ್ಪಾಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲೆಯಲ್ಲಿ ಈವರೆಗೆ 19 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಓರ್ವ ವೃದ್ಧೆ ಮೃತಪಟ್ಟಿದ್ದಾಳೆ.

ಒಟ್ಟೂ 572 ಜನರ ಗಂಟಲು ದ್ರವಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 375 ನೆಗೆಟಿವ್ ಬಂದಿದ್ದರೆ 19 ಪೊಸಿಟಿವ್ ಬಂದಿದೆ. ಇನ್ನೂ 178 ಜನರ ವರದಿ ಬರಬೇಕಿದೆ.

18 ಜನರ ಪೈಕಿ ಬೆಳಗಾವಿ ಕ್ಯಾಂಪ್ ಪ್ರದೇಶದ ಒಬ್ಬ, ಪಿರನವಾಡಿಯ ಒಬ್ಬ, ಬೆಳಗುಂದಿಯ ಒಬ್ಬ, ಹಿರೇಬಾಗೇವಾಡಿಯ 6 ಹಾಗೂ ರಾಯಬಾಗ ತಾಲೂಕು ಕುಡಚಿಯ 11 ಜನರಿದ್ದಾರೆ. ಇವರೆಲ್ಲರೂ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಬಂದವರು ಅಥವಾ ಅವರ ಸಂಪರ್ಕಕ್ಕೆ ಬಂದವರು.

ಜಿಲ್ಲೆಯಲ್ಲಿ ಇಲ್ಲಿಯವರೆಗೆ  1873 ಜನರ ಮೇಲೆ ನಿಗಾವಹಿಸಲಾಗಿದೆ. 292 ಜನ 14 ದಿನದ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ. ಆಸ್ಪತ್ರೆಯ ಐಸೋಲೇಟೆಡ್ ವಾರ್ಡ್ ನಲ್ಲಿರುವವರು 58 ಜನ. 664 ಜನರು 14 ದಿನದ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.  859 ಜನರು 28 ದಿನದ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ.

 ಬೆಳಗಾವಿ ಈಗ ಹಾಟ್ ಸ್ಪಾಟ್

ಕೇಂದ್ರ ಸರಕಾರ ಘೋಷಿಸಿರುವ ಹಾಟ್ ಸ್ಪಾಟ್ ಜಿಲ್ಲೆಗಳ ಪಟ್ಟಿಯಲ್ಲಿ ಬೆಳಗಾವಿಯೂ ಸೇರಿದೆ. ಕರ್ನಾಟಕದ 8 ಜಿಲ್ಲೆಗಳು ಹಾಟ್ಸ್ಪಾಟ್ ಎಂದು ಗುರುತಿಸಲ್ಪಟ್ಟಿವೆ. ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಇನ್ನಷ್ಟು ಕಠಿಣವಾಗಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button