Kannada NewsKarnataka NewsNationalPolitics
*ಡಿಕೆಶಿಗೆ ಡೆಂಗ್ಯೂ ಜ್ವರ: ಮೂರು ದಿನ ವಿಶ್ರಾಂತಿಗೆ ವೈದ್ಯರ ಸಲಹೆ*

ಪ್ರಗತಿವಾಹಿನಿ ಸುದ್ದಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಮೂರು ದಿನ ವಿಶ್ರಾಂತಿ ಮಾಡಲು ವೈದ್ಯರ ಸಲಹೆ ನೀಡಿದ್ದಾರೆ. ಹಾಗಾಗಿ ಮುಂದಿನ ಮೂರು ದಿನಗಳ ಕಾಲ ಯಾರನ್ನೂ ಭೇಟಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಳೆದ 4 ದಿನಗಳಿಂದ ಡಿಕೆಶಿ ಜ್ವರದಿಂದ ಬಳಲುತ್ತಿದ್ದರು. ಭಾನುವಾರ ಸಂಜೆ ಜ್ವರ ಹೆಚ್ಚಾಗಿತ್ತು. ನಿನ್ನೆ ಪರೀಕ್ಷೆಗೆ ಒಳಪಟ್ಟಾಗ ಡೆಂಗ್ಯೂ ದೃಢಪಟ್ಟಿದೆ.
ಇನ್ನೂ ಅನಾರೋಗ್ಯದ ಬಗ್ಗೆ ಡಿಸಿಎಂ ಡಿಕೆಶಿ ಪೋಸ್ಟ್ ಮಾಡಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ಯಾರನ್ನೂ ಭೇಟಿ ಆಗಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಯಾರನ್ನೂ ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ವಿಷಾದಿಸುತ್ತೇನೆ. ಯಾರೂ ತಪ್ಪು ತಿಳಿಯಬಾರದು ಎಂದು ಬರೆದುಕೊಂಡಿದ್ದಾರೆ.