Politics

*ಡಿ.ಕೆ ಶಿವಕುಮಾರ ಟೆಂಪಲ್ ರೌಂಡ್ಸ್*

ಪ್ರಗತಿವಾಹಿನಿ ಸುದ್ದಿ : ರಾಜ್ಯ ಕಾಂಗ್ರೆಸ್ ನಲ್ಲಿ ಒಂದೆಡೆ ಡಿನ್ನರ್ ಪಾಲಿಟಿಕ್ಸ್ ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರ ಕೈ ಆಂತರಿಕ ಭಿನ್ನಮತವನ್ನ ಮತ್ತಷ್ಟು ಹೆಚ್ಚಿಸಿದ್ದು, ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ ಟೆಂಪಲ್ ರನ್ ನಡೆಸಿದ್ದಾರೆ.

ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಕೈ ಹೈ ಕಮಾಂಡ್ ಪ್ರಯತ್ನ ಪಡುತ್ತಿದ್ದು ಹೈ ಕಮಾಂಡ್ ಮೂಲಕ ಆಪರೇಟ್ ಮಾಡಿರುವ ಡಿಸಿಎಂ ಡಿಕೆಶಿ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಈ ಮಧ್ಯೆ ಡಿಸಿಎಂ ಡಿಕೆಶಿ ಕೂಲ್ ಆಗಿ ಟೆಂಪಲ್ ರನ್ ಕೈಗೊಂಡಿದ್ದಾರೆ.

ಇವತ್ತು ಬೆಳಗ್ಗೆ ತಮಿಳನಾಡಿನ ಕುಂಭಕೋಣಂಗೆ ಭೇಟಿ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಅಲ್ಲಿ ಪ್ರತ್ಯಂಗೀರಾ ದೇವರು ಮತ್ತು ಕಾಂಚೀಪುರಂನ ವರದರಾಜು ಪೆರುಮಾಳ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಬೆಳಗ್ಗೆ 10:30ಕ್ಕೆ ಕುಂಬಕೋಣಂನಲ್ಲಿ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು 12ಗಂಟೆಗೆ ಕಾಂಚಿಪುರಂನ ವರದರಾಜು ಪೆರುಮಾಳ್ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಿದ್ದಾರೆ.

ತಮಿಳುನಾಡಿನ ಕುಂಭಕೊಂಣಂಗೆ ಗುರುವಾರ ಹೆಲಿಕಾಪ್ಟರ್ ನಲ್ಲಿ ಬಂದಿಳಿದ ಡಿಸಿಎಂ ಡಿ ಕೆ ಶಿವಕುಮಾ‌ರ್ ಅವರನ್ನು ಸ್ಥಳೀಯ ಮೇಯರ್ ಶರವಣನ್, ತಂಜಾವೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲೋಕನಾಥನ್, ಕಾಂಗ್ರೆಸ್ ಮುಖಂಡರಾದ ಕೃಷ್ಣಸ್ವಾಮಿ, ವೆಂಕಟೇಶ್ ಮತ್ತಿತರರು ಬರಮಾಡಿಕೊಂಡರು.ಎರಡು ದೇಗುಲಗಳ ದರ್ಶನ ಬಳಿಕ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button