Kannada NewsKarnataka NewsLatest

*ಕೈ ತಪ್ಪಿ ಬಿದ್ದ ಡಿ.ಕೆ.ಶಿವಕುಮಾರ್ ಮೊಬೈಲ್; ಆಮೇಲೇನಾಯ್ತು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಬಗ್ಗೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮೊಬೈಲ್ ಕೈ ಜಾರಿ ಬಿದ್ದ ಘಟನೆ ನಡೆದಿದೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಬೆಳಿಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬಾಂಬ್ ಬೆದರಿಕೆ ಕರೆ ಬಂದಿರುವ ವಿಚಾರವಾಗಿ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.

Home add -Advt

ಶಾಲೆಗಳ ಇ-ಮೇಲ್ ವಿಳಾಸಕ್ಕೆ ಬಂದಿರುವ ಥ್ರೆಟ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದ ವೇಳೆ ಡಿಸಿಎಂ ಕೈಲಿದ್ದ ಮೊಬೈಲ್ ಫೋನ್ ಕೆಳಗೆ ಬಿದ್ದಿದೆ.

ತಕ್ಷಣ ಸುತ್ತಲಿದ್ದ ನಾಲ್ವರು ಪೊಲೀಸ್ ಸಿಬ್ಬಂದಿ ಮೊಬೈಲ್ ಎತ್ತಿ ಕೊಡಲು ಓಡಿ ಬಂದಿದ್ದಾರೆ. ಪೋಲೀಸರು ಎತ್ತಿಕೊಟ್ಟ ಮೊಬೈಲ್ ಪಡೆದು ಡ್ಯಾಮೇಜ್ ಆಯ್ತಾ ಎಂದು ಡಿಕೆಶಿ ಪರಿಶೀಲಿಸಿದ್ದಾರೆ.

ಇದೇ ವೇಳೆ ಶಾಲೆಗಳಿಗೆ ಬಂದಿರುವ ಬೆದರಿಕೆ ಕರೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಡಿಸಿಎಂ ಸೂಚಿಸಿದರು.


Related Articles

Back to top button