ಪ್ರಗತಿವಾಹಿನಿ ಸುದ್ದಿ, ನವದೆಹಲಿ- ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಅ.15ರ ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ನೀಡಿದ್ದ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ಇಡಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು.
ಡಿ.ಕೆ.ಶಿವಕುಮಾರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಿನ್ನೆ ದೆಹಲಿ ಉಚ್ಛ ನ್ಯಾಯಾಲಯ ತಿರಸ್ಕರಿಸಿ ಅ.14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇಂದು ಜಾರಿ ನಿರ್ದೇಶನಾಲಯದ ನ್ಯಾಯಾಲಯ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಿಸಿದೆ.
ಡಿ.ಕೆ.ಸಿವಕುಮಾರ ಬಂಧನ ಅವಧಿ ವಿಸ್ತರಿಸುತ್ತಿದ್ದಂತೆ ಕೋರ್ಟ್ ಆವರಣದಲ್ಲಿ ಅವರ ಅಭಿಮಾನಿಗಳು ಕಣ್ಣೀರು ಹಾಕಿದರು. ಸೆಪ್ಟಂಬರ್ 3ರಂದು ಇಡಿ ಡಿ.ಕೆ.ಶಿವಕುಮಾರ ಅವರನ್ನು ಬಂಧಿಸಿತ್ತು.
ಅದಕ್ಕೂ ಮೊದಲು 3-4 ದಿನ ವಿಚಾರಣೆ ನಡೆಸಿ, ಅಂತಿಮವಾಗಿ ತನ್ನ ವಶಕ್ಕೇ ತೆಗೆದುಕೊಂಡಿತ್ತು. ಗಣೇಶ ಹಬ್ಬ ಆಚರಣೆಗೂ ಅವಕಾಶ ನೀಡದೆ ವಿಚಾರಣೆ ನಡೆಸಿದ ಇಡಿ ಕ್ರಮದಿಂದಾಗಿ ಡಿ.ಕೆ.ಶಿವಕುಮಾರ ಕಣ್ಣೀರು ಹಾಕಿದ್ದರು. ಇದೀಗ ನವರಾತ್ರಿಯನ್ನೂ ಜೈಲಿನಲ್ಲೇ ಕಳೆಯಬೇಕಾಗಿ ಬಂದಿದೆ.
ಈ ಮಧ್ಯೆ ಡಿ.ಕೆ.ಶಿವಕುಮಾರ ಸಹೋದರ ಡಿ.ಕೆ.ಸುರೇಶ್ ಗೆ ಕೂಡ ಇಡಿ ನೋಟೀಸ್ ಜಾರಿ ಮಾಡಿದೆ. ಅವರನ್ನೂ ಕೂಡ ವಿಚಾರಣೆಗೆ ಒಳಪಡಿಸಲಿದೆ. ಹಾಗಾಗಿ ಇಡಿ ತನಿಖೆ ಇನ್ನಷ್ಟು ಆಳಕ್ಕೆ ಹೋಗುವ ಸಾಧ್ಯತೆ ಇದೆ.
ಡಿ.ಕೆ.ಸುರೇಶ ಅವರು ಡಿ.ಕೆ.ಶಿವಕುಮಾರ ಅವರ ಮಗಳು ಐಶ್ವರ್ಯಾ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿದ್ದು, ಮತ್ತು ದೆಹಲಿ ಫ್ಲ್ಯಾಟ್ ನಲ್ಲಿ ಸಿಕ್ಕ ಹಣದಲ್ಲಿ ಸ್ವಲ್ಪ ಭಾಗ ತಮ್ಮದೆಂದು ಹೇಳಿಕೆ ನೀಡಿದ್ದರು. ಈ ಎಲ್ಲದರ ಕುರಿತು ಇಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ನ್ಯಾಯಾಂಗ ಬಂಧನಕ್ಕೆ ಡಿ.ಕೆ.ಶಿವಕುಮಾರ
ಡಿ.ಕೆ.ಶಿವಕುಮಾರ್ ಗೆ ಜಾಮೀನು ನಿರಾಕರಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ