Latest

12 ವರ್ಷ ಹಗಲು- ರಾತ್ರಿ ಕುಡಿಯಲಿಕ್ಕೆ ನಂದೇನು ಉಕ್ಕಿನ ಲಿವರಾ?: ಪಂಜಾಬ್ ಸಿಎಂ ಭಗವಂತ ಮಾನ್ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ, ಚಂಡಿಗಡ: ಕಳೆದ 12 ವರ್ಷಗಳಿಂದ ಹಗಲು- ರಾತ್ರಿ ಕುಡಿಯುತ್ತಾರೆ ಎಂಬ ಆರೋಪಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತಸಿಂಗ್ ಮಾನ್ ಪ್ರಶ್ನೆಯ ಮೂಲಕವೇ ಉತ್ತರ ನೀಡಿದ್ದಾರೆ.

“ಕಳೆದ 12 ವರ್ಷಗಳಿಂದ ಹಗಲಿರುಳು ಕುಡಿಯುತ್ತಿದ್ದರೆ ಒಬ್ಬ ವ್ಯಕ್ತಿ ಬದುಕಿರಬಹುದೇ..? ನನಗೆ ಉಕ್ಕಿನ ಲಿವರ್ ಇದೆಯೇ?” ಎಂದು ಮಾನ್ ಟಿವಿ ಶೋ ಒಂದರಲ್ಲಿ ಪ್ರಶ್ನಿಸಿದ್ದಾರೆ. ಈ ಮೂಲಕ ತಮ್ಮ ಮೇಲಿನ ಕುಡಿತದ ಚಟದ ಆರೋಪ ನಿರಾಕರಿಸಿದ್ದಾರೆ.

ಭಗವಂತ ಮಾನ್ ಅವರು ಹಗಲು- ರಾತ್ರಿ ಕುಡಿದಿರುತ್ತಾರೆ, ಅಂತ್ಯಸಂಸ್ಕಾರವೊಂದರ ವೇಳೆ, ಗುರುದ್ವಾರದಲ್ಲೂ ಕುಡಿದು ಪ್ರವೇಶ ಮಾಡಿದ್ದಾರೆ ಎಂದು ಪ್ರತಿಪಕ್ಷದವರು ಆರೋಪಿಸಿದ್ದು ಇದಕ್ಕೆ ಮಾನ್ ತಿರುಗೇಟು ನೀಡಿದ್ದಾರೆ. “ಒಬ್ಬ ವ್ಯಕ್ತಿ 12 ವರ್ಷ ಹಗಲು- ರಾತ್ರಿ ಕುಡಿದಿದ್ದರೆ ಆತ ಬದುಕಲು ಸಾಧ್ಯವೇ?” ಎಂದು ಪ್ರಶ್ನಿಸಿರುವ ಮಾನ್ “ಪ್ರತಿಪಕ್ಷದವರಿಗೆ ನನ್ನ ಬಗ್ಗೆ ಆರೋಪಿಸಲು ಏನೂ ಸಿಗುತ್ತಿಲ್ಲ. ಹೀಗಾಗಿ ಇಂಥ ಕ್ಷುಲ್ಲಕ ಆರೋಪಗಳನ್ನು ಎಸಗುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button