ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ಎಷ್ಟು ಕೋಟಿ ರೂ ನಷ್ಟ ಗೊತ್ತಾ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಒಂದು ಕಾಲದಲ್ಲಿ ಭಾರೀ ಹೆಸರು ಮಾಡಿದ್ದ ಮಲಪ್ರಭಾ ಅಲಿಯಾಸ್ ರಾಣಿ ಸಕ್ಕರೆ ಕಾರ್ಖಾನೆ ಈಗ ಭಾರೀ ನಷ್ಟ ಅನುಭವಿಸಿದೆ. 50 ವರ್ಷ ಹಳೆಯದಾದ ಈ ಕಾರ್ಖಾನೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರಕಾರ ಕೈ ಹಿಡಿಯುವ ಸಾಧ್ಯತೆ ಇಲ್ಲ.
ವಿಧಾನಸಭೆಯಲ್ಲಿ ಕಿತ್ತೂರು ಶಾಸಕ ಬಾಬಾ ಸಾಹೇಬ ಪಾಟೀಲ ಕೇಳಿದ ಪ್ರಶ್ನೆಗೆ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಲಿಖಿತ ಉತ್ತರ ನೀಡಿದ್ದಾರೆ. 31-3-2023ಕ್ಕೆ ಇದ್ದಂತೆ ಕಾರ್ಖಾನೆ 146 ಕೋಟಿ ರೂ. ಕ್ರೋಢೀಕೃತ ನಷ್ಟ ಅನುಭವಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಾರ್ಖಾನೆಗೆ 50 ಕೋಟಿ ರೂ. ಶೇರ್ ಕೆಪಿಟಲ್ ನೀಡುವ ಪ್ರಸ್ತಾವನೆ ಸರಕಾರದ ಮುಂದಿದೆಯೇ ಎನ್ನುವ ಪ್ರಶ್ನೆಗೆ ಈ ತರಹದ ಯಾವುದೆ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ತಿಳಿಸಿದ್ದಾರೆ.
ಸರಕಾರ ಶೇರ್ ಕೆಪಿಟಲ್ ನೀಡಿದಲ್ಲಿ ರೈತರಿಗೆ ಮತ್ತು ಕಾರ್ಖಾನೆಗೆ ಅನುಕೂಲವಾಗುವುದು ಸರಕಾರದ ಗಮನದಲ್ಲಿದೆಯೇ ಎನ್ನುವ ಪ್ರಶ್ನೆಗೆ ಅಂತಹ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ