ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆೆಳಗಾವಿಯಲ್ಲಿ ಮಂಗಳವಾರ ನಡೆದ ಕನ್ನಡ ಹಬ್ಬದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಒಟ್ಟಾರೆ 80 ಸಾವಿರ ಜನರು ಹೋಳಿಗೆ ಊಟ ಮಾಡಿದ್ದಾರೆಂದು ಸ್ವಾಮಿಗಳು ಪ್ರಗತಿವಾಹಿನಿಗೆ ಮಾಹಿತಿ ನೀಡಿದರು. ಯಾವುದೇ ಗೊಂದಲಗಳಿಲ್ಲದೆ ಇಷ್ಟು ದೊಡ್ಡ ಮಟ್ಟದ ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದಿದ್ದು ವಿಶೇಷವಾಗಿತ್ತು.
ಬೆಳಗಾವಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಸರದಾರ ಗ್ರೌಂಡಿನಲ್ಲಿ ಹೋಳಿಗೆ ಊಟದ ಕಾರ್ಯಕ್ರಮದ ಉದ್ಘಾಟನೆ ಮಾಡಿ, ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾಡುತ್ತಿರುವ ಕಾರ್ಯ ಅತಿ ವಿಶಿಷ್ಟವಾದದ್ದು.
80,000 ಜನರಿಗೆ 2 ಹೋಳಿಗೆ ಅನ್ನ ಸಾರು ಬದನೆಕಾಯಿ ಅಂದರೆ 1.60 ಲಕ್ಷ ಹೋಳಿಗೆ ಮಾಡಿಸಿದ್ದಾರೆ. ಅವರಿಗೆ ಕರ್ನಾಟಕ ಸರ್ಕಾರದ ಪರವಾಗಿ ಅಭಿನಂದಿಸುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಖ್ಯಾತ ನಟ ನಿರ್ದೇಶಕ ಸಾಯಿಕುಮಾರ ಮಾತನಾಡಿ ರಾಜ್ಯೊತ್ಸವವೆಂದರೆ ಬೆಳಗಾವಿ ತಾಯಿ ಚೆನ್ನಮ್ಮನ ನಾಡಿನಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಜೊಳಿಗೆಯಿಂದ ಹೋಳಿಗೆ ತಿಂದು ನನ್ನಂತ ಸಾವಿರಾರು ಕನ್ನಡ ಮನಸ್ಸುಗಳಿಗೆ ಸಂತೃಪ್ತಿ ಆಗಿದೆ ಎಂದರು .
ಸಮಸ್ತ ಕನ್ನಡಿಗರಿಗೆ ಹೋಳಿಗೆ ಊಟ ಉಣಬಡಿಸಿ ಮಾತನಾಡಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು. ಕನ್ನಡಿಗರ ಹಬ್ಬಕ್ಕೆ ಕುಣಿದು ಕುಪ್ಪಳಿಸಲು ಬಂದ ಕನ್ನಡಿಗರು ಇನ್ನೂ ಗಟ್ಟಿಯಾಗಿ ಕುಣಿದು ಕನ್ನಡದ ಕಂಪನ್ನು ಸುಸಲಿ ಎಂಬ ಮಹದಾಸೆಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿಗೆ ದಾಸೋಹ ಮಾಡುತ್ತಿದ್ದೇವೆ. ಕಾರ್ಯಕ್ರಮಕ್ಕೆ ಭಾಗಿಯಾದ ಎಲ್ಲರಿಗೂ ಭುವನೇಶ್ವರಿ ತಾಯಿಯ ಅನುಗೃಹವಾಗಲಿ ಎಂದರು.
ನಂತರ ಮಾತನಾಡಿದ ಖ್ಯಾತ ನಿರ್ದೇಶಕ ಶ್ರೀ ರಾಧಾಕೃಷ್ಣ ಪಲ್ಲಕ್ಕಿ ಅವರು ಹುಕ್ಕೇರೀಶರು ಜೋಳಿಗೆ ಹಿಡಿದು ನಮಗೆಲ್ಲ ಹೋಳಿಗೆ ಉಣಬಡಿಸುತ್ತಿದ್ದಾರೆ. ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ನಿತ್ಯ ನೂತನ ದಾಸೊಹಿಗಳು ಅವರ ಆಶಿರ್ವಾದ ಸದಾ ನಮ್ಮ ಮೇಲಿರಲಿ ಎಂದರು.
ಬೆಳಗಾವಿ ಸಂಸದೆ ಮಂಗಲಾ ಅಂಗಡಿ, ಶಾಸಕ ಅನಿಲ ಬೇನಕೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ , ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಮುಕ್ತಾರ್ ಪಠಾಣ, ರಾಯಬಾಗ ಯುವ ಮುಖಂಡ ಅರುಣ್ ಐಹೊಳೆ ಹಾಗೂ ಲಕ್ಷಾಂತರ ಕನ್ನಡಿಗರು ಕನ್ನಡದ ತೇರನ್ನು ಎಳೆದು ಹೋಳಿಗೆ ಊಟ ಸವಿದರು.
https://pragati.taskdun.com/latest/kannada-rajyotsavahukkeri-mathaholige-utabelagavichandrashekhara-sivacharya-swamiji/
https://pragati.taskdun.com/latest/belagavi-went-crazy-for-kannada-yellow-red-everywhere-you-look-it-brought-tears-to-see-the-joy-of-the-kannadigas/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ