
ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತದಲ್ಲಿ ಅತಿ ಹೆಚ್ಚು ಮಹಿಳಾ ಉದ್ಯೋಗಿಗಳನ್ನುಹೊಂದಿರುವ ಕಂಪನಿಗಳ ಪಟ್ಟಿಯೊಂದು ಬಿಡುಗಡೆಗೊಂಡಿದೆ.
ಬರ್ಗಂಡಿ ಪ್ರೈವೇಟ್ ಮತ್ತು ಹುರುನ್ ಇಂಡಿಯಾ ಈ ಕುರಿತು ಸಮೀಕ್ಷೆ ನಡೆಸಿ ಪಟ್ಟಿ ಬಿಡುಗಡೆಗೊಳಿಸಿದೆ.
ಸಮೀಕ್ಷೆಯ ಪ್ರಕಾರ ಮುಂಬೈ ಪ್ರಧಾನ ಕಚೇರಿ ಹೊಂದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಭಾರತದ ಯಾವುದೇ ಕಂಪನಿಗಳಿಗಿಂತ ಹೆಚ್ಚು, ಅಂದರೆ ಸುಮಾರು 2.1 ಲಕ್ಷ ಮಹಿಳಾ ಉದ್ಯೋಗಿಗಳನ್ನು ಹೊಂದಿದೆ.
ಟಿಸಿಎಸ್ ನಂತರದ ಸ್ಥಾನದಲ್ಲಿ ಇನ್ಫೋಸಿಸ್ (1.25 ಲಕ್ಷ), ವಿಪ್ರೋ (88,946), ಎಚ್‌ಸಿಎಲ್ (62,780) ಮತ್ತು ರಿಲಯನ್ಸ್ (62,560), ಮದರ್ಸನ್ ಸುಮಿ ಸಿಸ್ಟಮ್ಸ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್ (32,697), ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪೇಜ್ ಇಂಡಸ್ಟ್ರೀಸ್ ಟಾಪ್ 10 ರಲ್ಲಿರುವ ಇತರ ಕಂಪನಿಗಳು ಎಂದು ”ಎಂದು ಹುರುನ್ ಇಂಡಿಯಾದ ಎಂಡಿ ಮತ್ತು ಮುಖ್ಯ ಸಂಶೋಧಕ ಅನಾಸ್ ರೆಹಮಾನ್ ಜುನೈದ್ ಹೇಳಿದ್ದಾರೆ.
ಜೆಎನ್‌ಯು ಕ್ಯಾಂಪಸ್ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಘೋಷಣೆ