National

*ನೈಟ್ ಡ್ಯುಟಿಯಲ್ಲಿದ್ದ ನರ್ಸ್ ಮೇಲೆ ವ್ಯದ್ಯರಿಂದ ಅತ್ಯಾಚಾರಕ್ಕೆ ಯತ್ನ: ನರ್ಸ್ ಮಾಡಿದ್ದೇನು ಗೋತ್ತಾ..?*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯರ ಮೇಲೆ ನರ್ಸ್ ಬ್ಲೇಡ್ ನಿಂದ ಗುಂಪ್ತಾಂಗಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಬಿಹಾರದ ಸಮಸ್ತಿಪು‌ರ್ ಜಿಲ್ಲೆಯ ಮುಸ್ಲಿಘರಾರಿಯ ಗಂಗಾಪುರದ ಆರ್‌ಬಿಎಸ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಬುಧವಾರ ರಾತ್ರಿ ನರ್ಸ್ ಕೆಲಸ ಮಾಡುತ್ತಿರುವಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ್ ಕುಮಾರ್ ಮತ್ತು ಅವರ ಇಬ್ಬರು ಸಹಚರರು ಕೂಡಿದ ಮತ್ತಿನಲ್ಲಿ ನರ್ಸ್ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು.

ಈ ವೇಳೆ ನರ್ಸ್‌ ಕಾಪಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಯಾರು ಇಲ್ಲದ ಕಾರಣ ಸಹಾಯಕ್ಕೆ ಯಾರೊಬ್ಬರೂ ಆಗಮಿಸಿಲ್ಲ. ಆದರೂ ಧೃತಿಗೆಡದ ನರ್ಸ್ ಕೈಗೆ ಸಿಕ್ಕ ಬ್ಲೇಡ್ ನಿಂದ ವೈದ್ಯರ ಗುಂಪ್ತಾಂಗಕ್ಕೆ ಹಲ್ಲೆ ಮಾಡಿ ಎಸ್ಕೆಪ್ ಆಗಿದ್ದಾಳೆ.

ಹಲ್ಲೆ ಮಾಡಿದ ನಂತರ ಕಾಮುಕರಿಂದ ತಪ್ಪಿಸಿಕೊಂಡು ಬಂದ ನರ್ಸ್ ಆಸ್ಪತ್ರೆಯ ಹೊರಗಿರುವ ಮೈದಾನದ ಮೂಲೆಯಲ್ಲಿ ಅಡಗಿ ಕುಳಿತು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.

Home add -Advt

ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ನರ್ಸ್ ನನ್ನು ರಕ್ಷಿಸಿ ಆರೋಪಿಗಳಾದ ಡಾ. ಸಂಜಯ್, ಹಾಗೂ ಸಹಚರರಾದ ಸುನೀಲ್ ಕುಮಾರ್ ಗುಪ್ತಾ ಮತ್ತು ಅವಧೇಶ್ ಕುಮಾರ್‌ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಮೊದಲು ಮದ್ಯಪಾನ ಮಾಡಿ ಆರೋಪಿಗಳು ಆಸ್ಪತ್ರೆಯ ಡೋರ್ ಗಳನ್ನು ಒಳಗಿನಿಂದ ಲಾಕ್ ಮಾಡಿ ಬಳಿಕ ಎಲ್ಲ ಸಿಸಿಟಿವಿಗಳನ್ನು ಆಫ್ ಮಾಡಿ ಈ ಕೃತ್ಯ ಎಸಗಲು ಮುಂದಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪೊಲೀಸರು ಘಟನಾ ಸ್ಥಳದಲ್ಲಿ ಸಿಕ್ಕಿರುವ ಮದ್ಯದ ಬಾಟಲ್, ನರ್ಸ್ ಬಳಸಿದ್ದ ಬೇಡ್, ರಕ್ತಸಿಕ್ತ ಬಟ್ಟೆ ಮತ್ತು ಮೂರು ಸೆಲ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮಹಿಳೆಯ ಧೈರ್ಯ ಹಾಗೂ ಮನಸ್ಥಿತಿಗೆ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button