ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬಂದ ಯುವತಿ ಮೇಲೆ ವೈದ್ಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್ ನ ಅರುಂಧತಿ ನಗರದಲ್ಲಿ ನಡೆದಿದೆ.
19 ವರ್ಷದ ಯುವತಿ ಹೊಟ್ಟೆನೋವಿನಿಂದ ಬಳಲುತ್ತಿದ್ದು, ತನ್ನ ಅಜ್ಜಿಯ ಜೊತೆ ಅರುಂಧತಿ ನಗರದಲ್ಲಿರುವ ವೈದ್ಯ ಉಬೇದುಲ್ಲ ಕ್ಲಿನಿಕ್ ಗೆ ಹೋಗಿದ್ದಳು. ಈ ವೇಳೆ ಅಜ್ಜಿಯನ್ನು ಹೊರಗೆ ಕುಳಿತುಕೊಳ್ಳುವಂತೆ ಹೇಳಿದ ವೈದ್ಯ ಉಬೇದುಲ್ಲ, ಯುವತಿಯನ್ನು ಕ್ಲಿನ್ ಒಳಗೆ ಕರೆದೊಯ್ದು ಗ್ಲೂಕೋಸ್ ಹಾಕಿಸಿ ಮಲಗಿಸಿದ್ದ. ಬಳಿಕ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತಬರುತ್ತೆ ಎಂದು ಬೆದರಿಸಿ ಕೃತ್ಯವೆಸಗಿದ್ದು, ಬಳಿಕ ವಿಷಯ ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದಾನೆ. ಮನೆಗೆ ಬಂದ ಯುವತಿ ಭಯಗೊಂಡು ತೀವ್ರ ಜ್ವರದಿಂದ ಬಳಲಿದ್ದಾಳೆ. ಜ್ವರ ಹಿನ್ನೆಲೆಯಲ್ಲಿ ಕುಟುಂಬದವರು ಯುವತಿಯನ್ನು ಮತ್ತೆ ಅದೇ ಕ್ಲಿನಿಕ್ ಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಯುವತಿ ಮತ್ತೆ ಕ್ಲಿನಿಕ್ ಗೆ ಹೋಗಲ್ಲ ಎಂದು ಹಠ ಹಿಡಿದಿದ್ದಾಳೆ. ಯುವತಿಯ ಅಣ್ಣಂದಿರು ವಿಚಾರಿಸಿದಾಗ ಯುವತಿ ಕ್ಲಿನಿಕ್ ನಲ್ಲಿ ನಡೆದ ವಿಷಯ ತಿಳಿಸಿದ್ದಾಳೆ.
ಆಕ್ರೋಶಗೊಂಡ ಯುವತಿ ಅಣ್ಣಂದಿರು ಕ್ಲಿನಿಕ್ ಗೆ ನುಗ್ಗಿ, ಕ್ಲಿನಿಕ್ ಧ್ವಂಸಗೊಳಿಸಿದ್ದಾರೆ. ವೈದ್ಯ ಉಬೇದುಲ್ಲ ನಾಪತ್ತೆಯಾಗಿದ್ದು, ವೈದ್ಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿ ವೈದ್ಯನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪೇಸಿಎಂ ಪೋಸ್ಟರ್ ಅಂಟಿಸುವವರೆಗೂ ಸರ್ಕಾರ ಏನು ಮಾಡ್ತಿತ್ತು? ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆಕ್ರೋಶ
https://pragati.taskdun.com/politics/paycm-posterarun-singhbjp-core-committee-meeting/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ