ಸಿದ್ದೇಶ್ವರ ಶ್ರೀಗಳ ಸಧ್ಯದ ಆರೋಗ್ಯದ ಕುರಿತು ವೈದ್ಯರ ಮಾಹಿತಿ; ನಿಧಾನವಾದ ನಾಡಿಮಿಡಿತ, ಉಸಿರಾಟ

ಪ್ರಗತಿವಾಹಿನಿ ಸುದ್ದಿ, ವಿಜಯಪುರ – ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳಿಗೆ ವೈದ್ಯರ ಚಿಕಿತ್ಸೆ ಮುಂದುವರಿದಿದೆ.

ಶ್ರೀಗಳ ಸಧ್ಯದ ಆರೋಗ್ಯದ ಸ್ಥಿತಿಗತಿ ಕುರಿತು ವೈದ್ಯ ಡಾ.ಮಲ್ಲಣ್ಣ ಮೂಲಿಮನಿ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆಯಿಂದಲೂ ಶ್ರೀಗಳು ಯಾವುದೇ ಆಹಾರ ಸೇವಿಸಿಲ್ಲ. ಶ್ರೀಗಳ ಉಸಿರಾಟ ಸ್ವಲ್ಪ ನಿಧಾನವಾಗಿದೆ. ಅವರ ನಾಡಿಮಿಡಿತ ಸಹ ನಿಧಾನವಾಗಿದೆ ಎಂದು ಅವರು ತಿಳಿಸಿದ್ದಾರೆ.

 

ಶ್ರೀಗಳ ಆರೋಗ್ಯ ವಿಚಾರಿಸಲು ಸೋಮವಾರವೂ ಭಕ್ತರ ದಂಡು ಮಠದತ್ತ ಹರಿದುಬರುತ್ತಿದೆ. ಭಕ್ತರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸೈಹಸವಾಗಿದೆ. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿಪಾಟೀಲ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವಾರು ಗಣ್ಯರು ಸಹ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.

Home add -Advt

 

https://fb.watch/hOm7rav0ig/

 

https://fb.watch/hOm7rav0ig/

 

*ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಆರೋಗ್ಯ ಗಂಭೀರ*

https://pragati.taskdun.com/siddeshwara-swamijihealth-criticlevijayapura/

2023ರಲ್ಲಿ ವೆಂಕಟೇಶ್ವರನ ಆಶಿರ್ವಾದ: ಸಿಎಂ ಬಸವರಾಜ ಬೊಮ್ಮಾಯಿ

https://pragati.taskdun.com/bjp-will-come-to-power-in-next-elections-cm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button