ಯುಕೆ – ಅಡುಗೆ ಮನೆಯ ನಳ ತಿರುಗಿಸಲು ಕಲಿತಿದ್ದ ನಾಯಿಯೊಂದು ಮಾಲೀಕ ಹೊರ ಹೋದಾಗ ನಳ ತಿರುಗಿಸಿ ಸ್ನಾನ ಮಾಡಿದೆ. ಆದರೆ ನಳ ಬಂದ್ ಮಾಡದೆ ಬಿಟ್ಟ ಕಾರಣ ಮನೆಯೊಳಗೆಲ್ಲ ನೀರು ತುಂಬಿ ೪ ಲಕ್ಷ ರೂ. ಹಾನಿಯಾಗಿದೆ.
ಯುನೈಟೆಡ್ ಕಿಂಗ್ಡಮ್‌ನಲ್ಲಿ ಇಂಥಹ ಅಚ್ಚರಿಯ ಘಟನೆಯೊಂದು ನಡೆದಿದೆ. ವಿಸ್ಕಿ ಎಂಬ ಲ್ಯಾಬ್ರಡಾರ್ ತಳಿಯ ನಾಯಿ ಅತ್ಯಂತ ಚುರುಕಾಗಿದೆ. ಆದರೆ ಅದಕ್ಕೆ ನಳ ತಿರುಗಿಸಲು ಬರುತ್ತದೆ ಎಂಬುದು ಮಾಲೀಕನಿಗೆ ಗೊತ್ತಿರಲಿಲ್ಲ. ಮಾಲೀಕ ನಾಯಿಯನ್ನು ಮನೆಯೊಳಗೆ ಬಿಟ್ಟು ಹೋಗಿದ್ದ. ಕೂತು ಕೂತು ಬೇಜಾರಾದ ನಾಯಿ ಅಡುಗೆ ಮನೆಯ ನಳ ತಿರುಗಿಸಿದೆ. ಚಿಮ್ಮುವ ನೀರಿನಲ್ಲಿ ಆಟವಾಡಿದೆ. ಆದರೆ ನಳವನ್ನು ಬಂದ್ ಮಾಡದೆ ತನಗೆ ಸಾಕಾಗುವಷ್ಟು ಮನೋರಂಜನೆ ಪಡೆದು ಸುಮ್ಮನಾಗಿದೆ.
ಹೊರಗಡೆ ಹೋಗಿದ್ದ ಮಾಲೀಕ ಮನೆಗೆ ಬಂದಾಗ ಶಾಕ್ ಆಗಿದ್ದಾನೆ. ಅಡುಗೆ ಮನೆ ಸೇರಿದಂತೆ ಮನೆಯ ಬಹುತೇಕ ಪೀಠೋಪಕರಣಗಳು ನೀರಿನಲ್ಲಿ ತೋಯ್ದು ತೊಪ್ಪೆಯಾಗಿದ್ದು ಕಂಡು ಹೌಹಾರಿದ್ದಾನೆ. ಮನೆಯೊಳಗೆ ಅಳವಡಿಸಿದ್ದ ಸೆಕ್ಯುರಿಟಿ ಕ್ಯಾಮರಾ ಪರಿಶೀಲಿಸಿದಾಗ ನಾಯಿಯ ಘನ ಕಾರ್ಯ ಬಯಲಾಗಿದೆ. ಬಳಿಕ ಮನೆ ಮಾಲೀಕ ಪೀಠೋಪಕರಣಗಳ ಇನ್ಶುರೆನ್ಸ್ ಕಂಪನಿಗೆ ಕ್ಲೇಮ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ನಾಯಿ ಕಾಟಕ್ಕೆ ಬೇಸತ್ತಿರುವ ಇನ್ಶುರೆನ್ಸ್ ಕಂಪನಿ
ಘಟನೆಯ ಮಾಹಿತಿ ನೀಡಿರುವ ಇನ್ಶುರೆನ್ಸ್ ಕಂಪನಿ ಅವಿವಾ, ವರ್ಷಕ್ಕೆ ೮೦೦ಕ್ಕೂ ಹೆಚ್ಚು ನಾಯಿಯಿಂದ ವಸ್ತುಗಳು ಹಾಳಾದ ಪ್ರಕರಣಗಳು ಬರುತ್ತಿವೆ ಎಂದು ಗೋಳು ತೋಡಿಕೊಂಡಿದೆ.
ಮತ್ತೊಂದು ಪ್ರಕರಣದಲ್ಲಿ ಮಾಲೀಕ ಫಿಶ್ ಟ್ಯಾಂಕ್ ಕ್ಲೀನ್ ಮಾಡುತ್ತಿರುವಾಗ, ನಾಯಿ ಲ್ಯಾಪ್ ಟಾಪ್‌ಅನ್ನು ನೀರಿನೊಳಗೆ ದೂಡಿ ಹಾಕಿದೆ. ಇನ್ನೊಂದು ನಾಯಿ ಪೇಂಟ್ ಡಬ್ಬ ಚೆಲ್ಲಿ ಕಾರ್ಪೇಟ್ ಅನ್ನು ನಾಶ ಮಾಡಿದೆ ಎಂದು ವಿವರಿಸಿದೆ.
ಭಾರತದಿಂದ ಹಾರಿ ಬಂದ ಮಿಸೈಲ್‌ಗೆ ಬೆಚ್ಚಿಬಿದ್ದ ಪಾಕಿಸ್ತಾನ ! ಭಾರತ ನೀಡಿದ ಉತ್ತರವೇನು ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ