Latest

ಡೋಲೊ ಅಕ್ರಮಗಳ ತನಿಖೆಗೆ ಸಮಿತಿ ರಚನೆ

ಪ್ರಗತಿವಾಹಿನಿ ಸುದ್ದಿ: ‘ಡೋಲೊ 650’ ಮಾತ್ರೆ ಯನ್ನು ಉತ್ಪಾದಿಸುವ ಬೆಂಗಳೂರು ಮೂಲದ ಕಂಪನಿಯು ತನ್ನ ಉತ್ಪನ್ನಗಳ ಪ್ರಚಾರಕ್ಕೆ ಅನೈತಿಕ ಮಾರ್ಗಗಳನ್ನು ಅನುಸರಿಸಿದೆ ಎಂಬ ಆರೋಪಗಳಿವೆ. ಈ ಕುರಿತು ವಿಶೇಷ ತನಿಖೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಷಧಗಳ ಇಲಾಖೆ ನಿರ್ಧರಿಸಿವೆ.

ಈ ಸಂಬಂಧ ಇಲಾಖೆಗಳು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಡಿಯಲ್ಲಿ ಬರುವ ನೈತಿಕ ಸಮಿತಿಗೆ ತನಿಖೆ ನಡೆಸುವಂತೆ ಸೂಚಿಸಿದ್ದು, ಜಂಟಿ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ರಚಿಸಲಾಗಿದೆ.

ಫಾರ್ಮಾ ಕಂಪನಿಗಳು ಮತ್ತು ವೈದ್ಯರು ಒಟ್ಟಾಗಿ ಮಾರುಕಟ್ಟೆಯನ್ನು ಹೇಗೆ ದುರ್ಬಳಕೆ, ಮಾಡಿಕೊಂಡಿದ್ದಾರೆ, ಅತಿಯಾದ ಮಾರಾಟವನ್ನು ಹೇಗೆ ನಡೆಸಿದ್ದಾರೆ ಎಂಬುದರ ಕುರಿತು ಆದಷ್ಟು ಬೇಗ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.

ವೈದ್ಯರಿಗೆ 1,000 ಕೋಟಿ ರೂ. ಮೌಲ್ಯದ ನಾನಾ ಉಡುಗೊರೆ ನೀಡಿದ ಆರೋಪ
”ಮೈಕ್ರೋ ಲ್ಯಾಬ್‌ ಕಂಪನಿಯು ತನ್ನ ಉತ್ಪನ್ನಗಳ ಪ್ರಚಾರಕ್ಕೆಂದೇ ಸುಮಾರು 1.50 ಲಕ್ಷ ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದ ವೃತ್ತಿಪರರಿಗೆ 1,000 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳನ್ನು ನೀಡಿದೆ. ಚಿನ್ನಾಭರಣಗಳು, ವಿದೇಶ ಪ್ರವಾಸ, ಆಸ್ಪತ್ರೆಗಳಿಗೆ ಉಪಕರಣಗಳು ಇತ್ಯಾದಿಗಳನ್ನು ಉಡುಗೊರೆ ರೂಪದಲ್ಲಿ ನೀಡಿದೆ. ನಾನಾ ರೂಪದಲ್ಲಿ ಸೇರಿ ಸುಮಾರು 300 ಕೋಟಿ ರೂ. ತೆರಿಗೆ ವಂಚನೆ ನಡೆಸಿದೆ, ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಇತ್ತೀಚೆಗಷ್ಟೇ ಆರೋಪಿಸಿತ್ತು. ತೆರಿಗೆ ವಂಚನೆ ಸಂಬಂಧ ದೇಶಾದ್ಯಂತ ಇರುವ ಕಂಪನಿಯ ಕಚೇರಿಗಳ ಮೇಲೆಯೂ ದಾಳಿಯೂ ನಡೆದಿತ್ತು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button