HealthKannada NewsPoliticsWorld

*ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್*

ಪ್ರಗತಿವಾಹಿನಿ ಸುದ್ದಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬ‌ರ್ 1ರಿಂದ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ 100% ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಈ ನಿರ್ಧಾರವು ಭಾರತಕ್ಕೆ ದೊಡ್ಡ ಆರ್ಥಿಕ ಶಾಕ್ ನೀಡದೆ.

ಒಂದು ಕಂಪನಿಯು ಅಮೆರಿಕದಲ್ಲಿ ಔಷಧ ಉತ್ಪಾದನಾ ಘಟಕವನ್ನು ಸ್ಥಾಪಿಸದೇ ಹೋದರೆ, ಅಕ್ಟೋಬ‌ರ್ 1 ರಿಂದ ಆ ಉತ್ಪನ್ನಗಳಿಗೆ 100% ಸುಂಕ ವಿಧಿಸಲಾಗುವುದು. ಆದರೆ ಅಮೆರಿಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಂಪನಿಗಳ ಉತ್ಪನ್ನಗಳಿಗೆ ಸುಂಕ ವಿಧಿಸಲಾಗುವುದಿಲ್ಲ.” ಎಂದು ಟ್ರಂಪ್ ಟೂತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇದರಿಂದ ವಿದೇಶಿ ಕಂಪನಿಗಳು ಅಮೆರಿಕದಲ್ಲಿ ಉತ್ಪಾದನಾ ಘಟಕ ನಿರ್ಮಿಸಲು ಒತ್ತಡಕ್ಕೆ ಒಳಗಾಗಬಹುದು. ಭಾರತವು ಅಮೆರಿಕಕ್ಕೆ ಔಷಧ ರಫ್ತಿನ ಪ್ರಮುಖ ದೇಶವಾಗಿದ್ದು, ಹಣಕಾಸು ವರ್ಷ 24ರಲ್ಲಿ 27.9 ಶತಕೋಟಿ ಡಾಲರ್ ಮೌಲ್ಯದ ಔಷಧ ರಫಿಯಲ್ಲಿ 31% ಅಥವಾ 8.7 ಶತಕೋಟಿ ಡಾಲರ್ ಅಮೆರಿಕಕ್ಕೆ ಸಾಗಿತು. 

ಜೆನೆರಿಕ್ ಔಷಧಿಗಳಲ್ಲಿ 45%, ಬಯೋಸಿಮಿಲರ್ ಔಷಧಿಗಳಲ್ಲಿ 15%ಕ್ಕೂ ಹೆಚ್ಚು ಪೂರೈಕೆ ಭಾರತದಿಂದ ಬರುತ್ತದೆ. ಡಾ. ರೆಡೀಸ್, ಅರಬಿಂದೋ ಫಾರ್ಮಾ, ಸನ್ ಫಾರ್ಮಾ, ಜೈಡಸ್ ಲೈಫ್‌ಸೈನ್ಸ್ ಹಾಗೂ ಗ್ಲಾಂಡ್ ಫಾರ್ಮಾ ಸಂಸ್ಥೆಗಳು ಅಮೆರಿಕ ಮಾರುಕಟ್ಟೆಯಿಂದ ಒಟ್ಟು ಆದಾಯದ 30-50% ಗಳಿಸುತ್ತವೆ ಎನ್ನಲಾಗಿದೆ.

Home add -Advt

Related Articles

Back to top button