Kannada NewsLatest

ಚರ್ಮ, ನೇತ್ರ ಹಾಗೂ ದೇಹದಾನ ನೀಡಿ ಸಾವಿನಲ್ಲೂ ಸಾರ್ಥಕತೆ

ಚರ್ಮ,ನೇತ್ರ ಹಾಗೂ ದೇಹದಾನ ನೀಡಿ ಸಾವಿನಲ್ಲೂ ಸಾರ್ಥಕತೆ  

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ: ಬೈಲಹೊಂಗಲ ಪಟ್ಟಣದ ಜಿಗಜಿನ್ನಿ ಖೂಟ ನಿವಾಸಿ ಷಣ್ಮುಖಪ್ಪ ವೀರಪ್ಪ ಜಿಗಜಿನ್ನಿ (92) ಮಂಗಳವಾರ  ನಿಧನರಾದರು. ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ,

ಮೃತರ ಇಚ್ಛಾನುಸಾರವಾಗಿ ಅವರ ಕುಟುಂಬದ ಸದಸ್ಯರು ಬೈಲಹೊಂಗಲದ ಡಾ. ರಾಮಣ್ಣವರ ಚಾರೀಟೆಬಲ್ ಟ್ರಸ್ಟ ವತಿಯಿಂದ ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮೃತರ ದೇಹವನ್ನು ಕೆ.ಎಲ್.ಇ. ವಿಶ್ವವಿದ್ಯಾಲಯದ ಬೆಳಗಾವಿಯ ಶ್ರೀ ಬಿ. ಎಮ್. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಗೆ ದೇಹವನ್ನು ದಾನ ನೀಡಿ ಮಾನವೀಯತೆ ಮೆರೆದಿದ್ದಾರೆ.

ಮೃತರ ದೇಹವನ್ನು ಧನ್ವಂತರಿ ಸ್ತವನದೊಂದಿಗೆ ಬರಮಾಡಿಕೊಳ್ಳಲಾಯಿತು. ಕಾಲೇಜಿನ ಉಪಪ್ರಾಚಾರ್ಯ ಡಾ.ಪಿ.ಜೆ. ಜಾಡರ ಹಾಗೂ ಕಾಲೇಜಿನ ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ, ಪ್ರಾಧ್ಯಾಪಕ ಡಾ. ಬಿ ಬಿ ದೇಸಾಯಿ, ಡಾ. ಅಂಜು ಉಪ್ಪಿನ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಅಂಗಡಿ ಅವರ ಪಾರ್ಥೀವ ಶರೀರಕ್ಕೆ ಪುಷ್ಪಾರ್ಚನೆ ಮಾಡಿ ಮೃತರ ಆತ್ಮಕ್ಕೆ ಶಾಂತಿಕೋರಿ ಮೌನಾಚರಣೆ ಮಾಡಿ ಪಡೆದುಕೊಂಡರು.

ಮೃತರು ಡಾ. ರಾಮಣ್ಣವರ ಚಾರಿಟೆಬಲ್ ಟ್ರಸ್ಟ ಮೂಲಕ ಡಾ. ಪ್ರಭಾಕರ ಕೊರೆ ಆಸ್ಪತ್ರೆಯ ನೇತ್ರ ಹಾಗೂ ಚರ್ಮ ಭಂಡಾರಕ್ಕೆ ತಮ್ಮ ನೇತ್ರ ಹಾಗೂ ಚರ್ಮ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನೇತ್ರಗಳನ್ನು ಧಾನ ಮಾಡಿ ಮೃತರ ಕಣ್ಣುಗಳು ಮಣ್ಣಿಗೆ ಹೋಗುವದಕ್ಕಿಂತ ಇಬ್ಬರ ಅಂಧರಬಾಳಿಗೆ ದೃಷ್ಟಿಭಾಗ್ಯ ನೀಡುವುದರೊಂದಿಗೆ ಇತರರಿಗೆ ಮಾದರಿಯಾಗಿದ್ದಾರೆ.

ವ್ಯಕ್ತಿ ಮರಣಾನಂತರದ ಆರು ಘಂಟೆಗಳೊಳಗೆ ಚರ್ಮವನ್ನು ದಾನ ಮಾಡಬಹುದು. ದೇಹದ ಕಾಲು ,ತೊಡೆಯ ಭಾಗದಿಂದ ಚರ್ಮವನ್ನು ಪಡೆಯಲಾಗುತ್ತದೆ. ಚರ್ಮದಲ್ಲಿ ಹಲವು ಪದರಗಳಿರುತ್ತವೆ. ಅತ್ಯಂತ ಮೇಲ್ಪದರವನ್ನು ಮಾತ್ರ ಪಡೆಯಲಾಗುತ್ತದೆ. ಚರ್ಮ ತೆಗೆದ ಭಾಗದಿಂದ ರಕ್ತ ಸ್ರಾವ ಉಂಟಾಗುವುದಿಲ್ಲ ಮತ್ತು ದೇಹವು ವಿರೂಪಗೊಳ್ಳುವುದಿಲ್ಲ. ಬೆಂಕಿ ಅವಘಡಗಳಿಂದ ಆದ ಸುಟ್ಟಗಾಯಗಳಾಗಿ ನರಳುತ್ತಿರುವವರಿಗೆ, ಅಸಿಡ್ ದಾಳಿ, ಸಿಲೆಂಡರ್ ಸ್ಟೋ ಸ್ಪೋಟ್,ವಿದ್ಯುತ್ತನಿಂದ ಸುಟ್ಟ ಪ್ರಕರಣಗಳಲ್ಲಿ ಗಾಯಾಳುಗಳಿಗೆ ಇಂಥ ಚರ್ಮವನ್ನು ಗಾಯದ ಮೇಲೆ ಇಡುವುದರಿಂದ ಶೀಘ್ರ ಗುಣಮುಖರಾಗುತ್ತಾರೆ.ದಾನಿಗಳಿಂದ ಸಂಗ್ರಹಿಸಿದ ಚರ್ಮವನ್ನು ವ್ಶೆಜ್ಞಾನಿಕವಾಗಿ ಸಂಸ್ಕರಿಸಿ ಗಾಯಾಳುಗಳಿಗೆ ಉಪಯೋಗಿಸಲಾಗುವುದು.

ಅವಶ್ಯಕ ವ್ಯಕ್ತಿಗಳಿಗೆ ಅಂಗಗಳನ್ನು ಕಸಿಮಾಡಿ ನೊಂದವರ ಬಾಳಿಗೆ ಬೆಳಕಾಗಿ ಸಾವಿನಲ್ಲಿಯೂ ಜೀವನ ಸಾರ್ಥಕ್ಯ ಪಡೆಯಲು ದೇಹ, ಅಂಗಾಂಗಳ ದಾನ ಮಾಡಬೇಕು ಎಂದು ದೇಹ ದಾನ,ಅಂಗಾಂಗಳ ದಾನದ ಕುರಿತು ಡಾ.ರಾಮಣ್ಣವರ ಜನರಲ್ಲಿ ಜಾಗೃತಿ ಮೂಡಿಸಿದರು.

ಜಿಗಜಿನ್ನಿ ಕುಟುಂಬದವರಿಗೆ ಪ್ರಾಂಶುಪಾಲ ಡಾ.ಬಿ.ಎಸ್ ಪ್ರಸಾದ ಕೃತಜ್ಞತೆ ಸಲ್ಲಿಸಿದ್ದಾರೆ.

ನೇತ್ರ ಚರ್ಮ ಹಾಗೂ ದೇಹದಾನ ಮಾಡಲು ಇಚ್ಛಿಸುವವರು ಮೊ :9242496497 ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button