Kannada NewsKarnataka News

ಶಿಕ್ಷಣ ಪಡೆಯುವ ಹಂತದಲ್ಲಿ ಬೇರೆ ವ್ಯಸನಗಳಿಗೆ ಬಲಿಯಾಗದಿರಿ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಎಂ.ಕೆ.ಹುಬ್ಬಳ್ಳಿ –  ಪಟ್ಟಣದ ಎಸ್.ಕೆ.ಇ.ಎಸ್ ಕಮೀಟಿಯ ಶ್ರೀ ಕಲ್ಮೇಶ್ವರ ಸಂಯುಕ್ತ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗಣೇಶೋತ್ಸವದ ನಾಲ್ಕನೇ ದಿನದಂದು ಅಭಿನಂದನಾ ಸಮಾರಂಭಕ್ಕೆ ವಿಧಾನ ಪರಿಷತ್ತ ಚನ್ನರಾಜ ಹಟ್ಟಿಹೊಳಿ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಶಿಕ್ಷಣ ನಮ್ಮ ಜೀವನವನ್ನು ರೂಪಿಸುತ್ತದೆ.​​ ​​ಶಿಕ್ಷಣ ಪಡೆಯುವ ಹಂತದಲ್ಲಿ ಬೇರೆ ವ್ಯಸನಗಳಿಗೆ ಬಲಿಯಾಗದೆ ಶಿಕ್ಷಕರು ಮಾಡುವ ಪಾಠಗಳನ್ನು ಸರಿಯಾಗಿ ಆಲಿಸಿ,  ಉತ್ತಮ ಶಿಕ್ಷಣವನ್ನು ಪಡೆದು ಸಮಾಜದ ಉತ್ತಮ ಪ್ರಜೆಗಳಾಗಿ ತಮಗೆ ಕಲಿಸಿದ ಶಿಕ್ಷಕರಿಗೆ, ತಂದೆ, ತಾಯಿ ಹಾಗು ಊರಿಗೆ ಕೀರ್ತಿ ತಂದು ಕೊಡಬೇಕು ಎಂದರು.

ದತ್ತವಾಡದ ಹೃಷಿಕೇಶಾನಂದ ಬಾಬಾಮಹಾರಾಜರು ಸಾನಿಧ್ಯ ವಹಿಸಿದರು. ಬಸಪ್ಪ ಕರವಿನಕೊಪ್ಪ ಅಧ್ಯಕ್ಷತೆ ವಹಿಸಿದರು.
ಕ.ರಾ.ಪ್ರೌ.ಶಾ.ಸ ಶಿಕ್ಷಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮಪ್ಪ ಗುಗವಾಡ, ಬೆಳಗಾವಿ ಕ.ರಾ.ಪ್ರೌ.ಶಾ.ಸ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಸಿದ್ಧನಗೌಡ ಪಾಟೀಲ, ಬೆಳಗಾವಿ ಕ.ರಾ.ಪ್ರೌ.ಶಾ.ಸ ಶಿಕ್ಷಕ ಸಂಘದ ಸಂಘಟನಾ ಕಾರ್ಯದರ್ಶಿ ಶಿವಾನಂದ ಮಳಗಲಿ, ತಾಲುಕಾ ಘಟಕದ ಅಧ್ಯಕ್ಷ ಗಜಾನಂದ ಸೋಗಲನ್ನವರ  ಗಹಕಾರ್ಯದರ್ಶಿ ಶಂಕರ ಕಳಸಣ್ಣವರ ಇವರುಗಳನ್ನು ಸನ್ಮಾನಿಸಲಾಯಿತು.
ಈ ವೇಳೆ ಸಂಸ್ಥೆಯ ಎಲ್ಲ ಸದಸ್ಯರು ಹಾಗು ಶಿಕ್ಷಕರು ಇದ್ದರು.

 

https://pragati.taskdun.com/local/belagavirural-mla-laxmihebbalkar-fans-developmentqueen-firebrandlady-stickers-release/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button