Kannada NewsKarnataka News

ಶಾಲೆ, ಕಾಲೇಜುಗಳ ಬಳಿ ಹೋಗಬೇಡಿ ಎಂದು ಬೆಳಗಾವಿ ಪೊಲೀಸರು ಸೂಚಿಸಿದ್ದು ಏಕೆ?

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಮೀಷನರೇಟ್, ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡೂ ಸಮುದಾಯದ ಮುಖಂಡರು ಮತ್ತು ಬೆಳಗಾವಿ ನಗರದ ಪ್ರಮುಖರು ಹಾಗೂ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಸೌಹಾರ್ಧತಾ ಸಭೆ ನಡೆಯಿತು.

ಬೆಳಗಾವಿ ನಗರದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರಕ್ಕೆ ಸಂಬಂಧಿಸಿದಂತೆ ಶಾಂತಿ ಸುವ್ಯವಸ್ಥೆ ಕದಡುವಂತಹ ಯಾವುದೇ ಘಟನೆಗೆ ಪ್ರೋತ್ಸಾಹ ನೀಡದಂತೆ ಮನವಿ ಮಾಡಲಾಯಿತು.

ಉಚ್ಛ ನ್ಯಾಯಾಲಯದ ಆದೇಶವನ್ನು ಹಾಗೂ ಸರ್ಕಾರದ ಸೂಚನೆಗಳನ್ನು ತಪ್ಪದೇ ಪಾಲಿಸಿಕೊಂಡು ಬರುವಂತೆ ಸೂಚಿಸಲಾಯಿತು. ಶಾಲಾ ಕಾಲೇಜುಗಳ ಕಡೆಗೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಹೊರತುಪಡಿಸಿ ಬೇರೆ ಯಾರೂ ಹೊಗದಂತೆ ಸೂಚಿಸಲಾಯಿತು.

ಸಭೆಯಲ್ಲಿ ಸೇರಿದ್ದ ಎಲ್ಲ ಮುಖಂಡರು ಹಾಗೂ ಪ್ರಮುಖರು ಇದಕ್ಕೆ ಸಂಪೂರ್ಣ ಒಪ್ಪಿಗೆ ಸೂಚಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.
ಇದರೊಂದಿಗೆ ಹಿಜಾಬ್ ಮತ್ತು ಕೇಸರಿ ಶಾಲು ವಿಚಾರದಲ್ಲಿ ಯಾರೂ ಕೂಡ ವಾಟ್ಸಆಪ್, ಫೇಸಬುಕ್, ಇನ್ಸ್ಟಾಗ್ರಾಮ ಹಾಗೂ ಇನ್ನಿತರ ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋಧನಕಾರಿ ಪೋಸ್ಟ್ ಹಾಕುವುದಾಗಲಿ ಅಥವಾ ಹೇಳಿಕೆ/ ಪ್ರತಿ ಹೇಳಿಕೆಗಳನ್ನು ನೀಡುವುದಾಗಲಿ ಮಾಡಬಾರದೆಂದು ಸೂಚಿಸಲಾಯಿತು.

ಜನರಿಗೆ ಬೆಳಗಾವಿ ಪೊಲೀಸರ ವಾರ್ನಿಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button