Kannada News

ನಿಸರ್ಗದೊಂದಿಗೆ ಚಲ್ಲಾಟ ಬೇಡ – ದತ್ತಾತ್ರಯ ಹೊಸಬಾಳೆ

ಪ್ರಗತಿವಾಹಿನಿ ಸುದ್ದಿ,  ಸಿದ್ದೇಶ್ವರ ಸ್ವಾಮಿಜೀ ವೇದಿಕೆ ಕನ್ಹೇರಿಮಠ, (ಸಿದ್ದಗೀರಿ ಕೊಲ್ಹಾಪುರ) : 
ಸರಕಾರ ಮಾಡುವ ಕೆಲಸವನ್ನು ಕನೇರಿ ಮಠ ಮಾಡುತ್ತಿದ್ದು, ಈ ಮಠದ ಸ್ವಾಮೀಜಿಗಳಾದ ಶ್ರೀ ಅದೃಷ್ಯಕಾಡಸಿದ್ದೇಶ್ವರ ಮಹಾಸ್ವಾಮಿಗಳು ದೇಶ ಕಂಡ ಅಪರೂಪದ ಸ್ವಾಮಿಜೀಗಳಾಗಿದ್ದಾರೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ರವಿವಾರ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯ ಸಿದ್ದಗಿರಿ ಮಠದ ಆವರಣದಲ್ಲಿ ನಡೆಯುತ್ತಿರುವ ಪಂಚಮಹಾಭೂತ ಲೋಕೋತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿ,ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜೀಗಳು ಒಕ್ಕಲುತನ,ಗ್ರಾಮೀಣ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.ಗ್ರಾಮ ಪಂಚಾಯತಿಗಳಿಗೆ ನೇರ ಹಣ ನೀಡಬೇಕು,ರೈತ ದೇಶದ ಬೆನ್ನೆಲುಬು, ಗ್ರಾಮ ಅಭಿವೃದ್ಧಿ ದೇಶ ಸುಧಾರಣೆ ಆಗಲಿದೆ ಎಂದರು.

ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಗೆ ಸಚಿವ ನಾರಾಯಣ ರಾಣೆ ಮಾತನಾಡಿ, ರಾಜಕಾರಣಿಗಳು ಜನರ ಓಲೈಕೆಗಾಗಿ ಕೆಲಸ ಮಾಡುತ್ತಾರೆ. ಆದರೆ ಸ್ವಾಮಿಜೀ ಯಾವುದೇ ಫಲಾಪೇಕ್ಷೆ ಬಯಸಿ ಸಮಾಜದ ಉದ್ದಾರಕ್ಕಾಗ ಸೇವೆ ಸಲ್ಲಿಸುವುದಿಲ್ಲ, ಕೃಷಿ,ಆರೋಗ್ಯ,ಶಿಕ್ಷಣ ಸೇವೆ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಿಸಲು ಪಂಚಮಹಾಭೂತ ಲೋಕೋತ್ಸವ ಸಮಾರಂಭ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ಆರ್.ಎಸ್.ಎಸ್.ಪ್ರಧಾನ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕಹಿತಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿರುವ ಸಾಧು ಸಂತರು ಶ್ರಮಿಸುತ್ತಿದ್ದಾರೆ ಎಂದರು.
ಮನುಷ್ಯ ನಿಸರ್ಗದ ಅವಿಭಾಜ್ಯ ಅಂಗವಾಗಿದ್ದು, ನಿಸರ್ಗದ ಶಿಶು ಮತ್ತು ಪೃಕೃತಿ ನಮ್ಮ ಮಾತೆ ಇದ್ದಂತೆ, ನಿಸರ್ಗವನ್ನು ಆರಾಧಿಸಬೇಕು. ಅದರೊಂದಿಗೆ ಚೆಲ್ಲಾಟವಾಡದೇ ಮುಂದಿನ ಯುವ ಪೀಳಿಗೆಗೆ ಪಂಚಮಹಾಭೂತಗಳನ್ನು ರಕ್ಷಿಸೋಣ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಕನೇರಿ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಮಾತನಾಡಿ, ಮಣ್ಣು ಕಲುಷಿತಗೊಳಿಸುವ ರಾಸಾಯನಿಕ ಗೊಬ್ಬರ,ಪ್ಲ್ಯಾಸ್ಟಿಕ್ ಮತ್ತಿತರ ಬಳಕೆಯನ್ನು ರೈತರು ನಿಲ್ಲಿಸಬೇಕು,ಪ್ರತಿ ವರ್ಷ ಬೆಳೆ ಬದಲಿಸಿದಾಗ ಉತ್ತಮ ಸಾತ್ವಿಕ ಬೆಳೆ ತೆಗೆಯಲು ಸಾಧ್ಯ ಎಂದರು.
ನಗರವಾಸಿಗಳು ತಮ್ಮ ಮನೆಯ ಸುತ್ತ ಕನಿಷ್ಠ ೫ ಗಿಡಗಳನ್ನಾದರು ಬೆಳೆಸಬೇಕು.ಒಬ್ಬ ವಿದ್ಯಾರ್ಥಿ ಮನೆಗೊಂದು ಮರ,ಶಾಲೆಗೊಂದು ಉದ್ಯಾನ ಆಗುವಂತೆ ನೋಡಿಕೊಳ್ಳಬೇಕೆಂದರು.

ಕುಡಿಯುವ ನೀರು, ಇಂಧನ,ಶುದ್ದಗಾಳಿ ಸೇರಿದಂತೆ ಇನ್ನುಳಿದವುಗಳನ್ನು ಅಗತ್ಯಕ್ಕಿಂತ ಹೆಚ್ಚಿನದನ್ನುಬಳಸಿದರೆ ಮುಂದಿನ ಪೀಳಿಗೆಗೆ ಸಂಪನ್ಮೂಲ ಉಳಿಯದು, ಲೋಕೋತ್ಸವವನ್ನು ಉತ್ಸವವನ್ನಾಗಿಸದೇ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಮುಜರಾಯಿ ಹಜ್ ಹಾಗೂ ವಕ್ಪ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಗೋವಾ ವಿಧಾನ ಪರಿಷತ್ ಸಭಾಪತಿ ರಮೇಶ ತಾವಡಕರ,ಶಾಸಕ ಮಹೇಶ ಶಿಂಧೆ, ಕೊಲ್ಲಾಪುರ ಜಿಲ್ಲಾ ಪಂಚಾಯತಿ ಸಿಇಓ ಸಂಜಯಸಿಂಹ ಚವ್ಹಾಣ ಉಪಸ್ಥಿತರಿದ್ದರು.
ರಮೇಶ ಪಾಟೀಲ ನಿರೂಪಿಸಿದರು.
ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಜನರು ಭಾಗವಹಿಸಲಿದ್ದಾರೆ, ರೋಡ್‌ ಶೋ ನೋಡಲು 8 ಪಾಯಿಂಟ್‌ – ಪ್ರಹ್ಲಾದ ಜೋಶಿ

https://pragati.taskdun.com/more-than-one-lakh-people-will-attend-pm-modis-event-prahlada-joshi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button