Kannada NewsKarnataka News

ಅಕ್ಕೊಳ ಗ್ರಾಮದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅವರಿಂದ ಮನೆ ಮನೆ ಪ್ರಚಾರ

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಸ್ಥಳೀಯ ಮತಕ್ಷೇತ್ರದ ಅಕ್ಕೊಳ ಗ್ರಾಮದಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಭಾನುವಾರ ಮನೆಮನೆಗೆ ತೆರಳಿ ಪ್ರಚಾರ ನಡೆಸಿ ತಾವು ಶಾಸಕಿಯಾಗಿ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.


ತಮ್ಮ ಮತ ಪತ್ರಿಕೆ ನಮೂನೆಯನ್ನು ವಿತರಿಸಿ ಮಾತನಾಡಿದ ಅವರು, ’ಕಳೆದ ಎರಡು ಬಾರಿ ಶಾಸಕಿಯಾಗಿ ಆಕ್ಕೊಳ ಗ್ರಾಮದಲ್ಲಿ ೬೩ ಕೋಟಿ ರೂ.ಗೂ ಅಧಿಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮದಲ್ಲಿ ರಸ್ತೆ, ಚರಂಡಿ, ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ, ಐ.ಟಿ.ಐ ಕಾಲೇಜು, ಅಂಗನವಾಡಿ, ದೇವಸ್ಥಾನಗಳ ಜೀರ್ಣೋದ್ದಾರ ಹೀಗೆ ಹಲವಾರು ಕಾಮಗಾರಿ ಕೈಗೊಂಡಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಸದವಕಾಶ ನೀಡಿದ್ದೀರಿ. ನಾನು ಕ್ಷೇತ್ರದ ಮತದಾರರು ನನ್ನ ಮೇಲಿಟ್ಟ ಭರವಸೆಯನ್ನು ಉಳಿಸಿಕೊಂಡಿದ್ದು, ಕಳೆದ ೧೦ ವ?ಗಳಲ್ಲಿ ಸುಮಾರು ೨ ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇನೆ’ ಎಂದರು.


’ಜನಸಾಮಾನ್ಯರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದು, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದೇನೆ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಇನ್ನೊಮ್ಮೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.
ಕ್ಷೇತ್ರದ ಬಿಜೆಪಿ ಪ್ರಮುಖರು ಮತ್ತು ನೂರಾರು ಮಹಿಳೆಯರು ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆ ಅವರಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ರಾವಸಾಹೇಬ ಫರಾಳೆ, ವಿಕಾಸ ಸಂಕಪಾಳ, ಸುಹಾಸ ಗೂಗೆ, ಸಂದೀಪ ಸದಾವರ್ತೆ, ಬಾಪುಸೋ ಕಟ್ಟಿಕಲೆ, ರವಿ ಸದಾವರ್ತೆ, ಸಂಜಯ ಪಿಸಾಳ, ಮಿಲಿಂದ ಕಮತೆ, ಓಂಕಾರ ಬಾರಾಮಲ, ನಿರಂಜನ ಕಮತೆ, ಮನಿಷಾ ರಾಂಗೋಳೆ, ನೇಹಾ ಕಮತೆ, ತೇಜಸ್ವಿನಿ ಪಾಟೀಲ, ಶುಭಾಂಗಿ ಪಿಸಾಳ, ಅನೀತಾ ಗೂಗೆ, ಸಾವಿತ್ರಿ ಜಾಧವ, ಜಿತೇಂದ್ರ ಕುಲಕರ್ಣಿ, ವೈಭವ ಕುಲಕರ್ಣಿ, ಬೂತ್ ಅಧ್ಯಕ್ಷರು, ಸದಸ್ಯರು, ಪಕ್ಷದ ಕಾರ್ಯಕರ್ತರು ಹಾಗೂ ನುರರು ಮಹಿಳೆಯರು ಉಪಸ್ಥಿತರಿದ್ದರು.

https://pragati.taskdun.com/belagavivoting-awarenessvidhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button