Kannada NewsKarnataka NewsLatest

*ಬೆಳಿಗ್ಗೆ ಗಂಡನ ಪಾದಪೂಜೆ; ಸಂಜೆ ಬಿತ್ತು ಹೆಂಡತಿ ಹೆಣ: ಪತಿಯಿಂದಲೇ ಪತ್ನಿ ಕೊಲೆ!*

ಪ್ರಗತಿವಾಹಿನಿ ಸುದ್ದಿ: ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸ್ಪಂದನಾ (26) ಮೃತ ಮಹಿಳೆ. ಅಭಿಷೇಕ್ ಎಂಬಾತನನ್ನು ಪ್ರೀತಿಸಿದ್ದ ಸ್ಪಂದನಾ ವರ್ಷದ ಹಿಂದಷ್ಟೇ ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಿದ್ದರು. ಮದುವೆಯಾಗಿ ಮನೆಗೆ ಬಂದ ಬಳಿಕ ಸ್ಪಂದನಾಳಿಗೆ ಪತಿ ಅಭಿಷೇಕ್ ತನ್ನ ನಿಜವಾದ ಮುಖ ತೀರಿಸಲಾರಂಭಿಸಿದ್ದಾನೆ. ವರದಕ್ಷಿಣೆಗಾಗಿ ಕಿರುಕುಳ ನೀಡುವುದು, ಹೊಡೆಯುವುದು ಮಾಡುತ್ತಿದ್ದ. ಪತಿಯ ಜೊತೆಗೆ ಅತ್ತೆ, ಕುಟುಂಬದ ಇತರ ಸದಸ್ಯರು ಸ್ಪಂದನಾಳಿಗೆ ಹಿಂಸಿಸುತ್ತಿದ್ದರಂತೆ. ಹಲವು ಬಾರಿ ತಂದೆ-ತಾಯಿಗೆ ಕರೆ ಮಾಡಿ ತನಗೆ ಮನೆಯವರು ಹೊಡೆಯುತ್ತಿದ್ದಾರೆ. ಹಣ ತಂದು ಕೊಡುವಂತೆ ಪೀಡಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಳಂತೆ.

ಮಗಳ ಕಣ್ಣೀರು ನೋಡಲಾಗದೇ ತಂದೆ-ತಾಯಿ ಹಾಗೂ ಅಭಿಷೇಕ್ ಹಾಗೂ ಆತನ ಕುಟುಂಬದ ನಡುವೆ ಒಮ್ಮೆ ರಾಜಿ ಮಾಡಿಸಿ ಮಾತುಕತೆ ಮಾಡಿದ್ದರಂತೆ ಬಳಿಕ ಕೆಲ ದಿನ ಸರಿ ಹೋಗಿದ್ದ ಅಭಿಷೇಕ್ ಮತ್ತೆ ಪತ್ನಿಗೆ ಕಿರುಕುಳ ನೀಡುವುದು ಹೊಡೆಯುವುದು ಮಾಡುತ್ತಿದ್ದನಂತೆ. ಹಣ ನೀಡುವಂತೆ ಮಗಳಿಗೆ ನೀಡುತ್ತಿದ್ದ ಕಿರುಕುಳ ಕಂಡು ಸ್ಪಂದನಾ ತಂದೆ ಒಮ್ಮೆ 5 ಲಕ್ಷ ಹಣ ನೀಡಿ ಪ್ರೀತಿಸಿ ಮದುವೆಯಾಗಿಯಾಗಿದೆ. ಈಗಲಾದರೂ ತನ್ನ ಮಗಳನ್ನು ಚನ್ನಾಗಿ ನೋಡಿಕೋ ಎಂದು ಬುದ್ಧಿ ಹೇಳಿದ್ದರಂತೆ.

Home add -Advt

ಇಷ್ಟಾಗ್ಯೂ ಅಭಿಷೇಕ್ ಹಾಗೂ ಆತನ ಕುಟುಂಬದ ಹಣದ ದಾಹ ಕಡಿಮೆಯಾಗಿಲ್ಲ. ಮತ್ತೆ ಮತ್ತೆ ವರದಕ್ಷಿಣೆ ಕಿರುಕುಳ, ಚಿತ್ರ ಹಿಂಸೆ ನೀಡುತ್ತಿದ್ದರಂತೆ. ನಿನ್ನೆ ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ಸ್ಪಂದನಾ ಬೆಳಿಗ್ಗೆ ಪತಿ ಅಭಿಷೇಕ್ ಪಾದಪೂಜೆ ಮಾಡಿ ಪತಿ ಆಯುಷ್ಯ ವೃದ್ಧಿಗಾಗಿ ಪ್ರಾರ್ಥಿಸಿದ್ದಳು. ಸಂಜೆಯಾಗುವಷ್ಟರಲ್ಲಿ ಪತ್ನಿ ಸ್ಪಂದನಾಳ ಆಯುಷ್ಯವನ್ನೇ ಮುಗಿಸಿದ್ದಾರೆ ಪತಿ ಹಾಗೂ ಕುಟುಂಬದವರು. ಸಂಜೆ ವೇಳೆಗೆ ಸ್ಪಂದನಾ ಸಾವನ್ನಪ್ಪಿದ್ದಾಳೆ. ಸಾವಿಗೂ ಮುನ್ನ ಬೆಳಿಗ್ಗೆ ಭೀಮನ ಅಮವಾಸ್ಯೆ ಪೂಜೆ ಮಾಡಿದ್ದನ್ನು ಫೋಟೋ ಕಳುಹಿಸಿದ್ದಳು. ಅಲ್ಲದೇ ತಂದೆಗೆ ಕರೆ ಮಾಡಿ ತನಗೆ ಮನೆಯಲ್ಲಿ ತುಂಬಾ ಹಿಂಸೆ ನೀಡುತ್ತಿದ್ದಾರೆ, ನಾನು ವಾಪಸ್ ಊರಿಗೆ ಬರುತ್ತೇನೆ ಎಂದಿದ್ದಳಂತೆ. ಬಳಿಕ ಮಧ್ಯಾಹ್ನ ಸಹೋದರಿಗೆ ವಾಟ್ಸಪ್ ಸಂದೇಶ ರವಾನಿಸಿದ್ದು, ನನ್ನ ಸಾವಿಗೆ ಪತಿ ಅಭಿಷೇಕ್ ಹಾಗೂ ಕುಟುಂಬ ಮತ್ತು ಆತನ ಆಫೀಸಿನವರು ಕಾರಣ ಎಂದು ಮೆಸೇಜ್ ಕಳುಹಿಸಿದ್ದಾಳೆ. ರಾತ್ರಿ 8:30ರ ಸುಮಾರಿಗೆ ಸ್ಪಂದನಾ ತಂದೆ-ತಾಯಿಗೆ ಕರೆ ಮಾಡಿರುವ ಅಭಿಷೇಕ್ ಸ್ಪಂದನಾ ಸಾವನ್ನಪ್ಪಿದ್ದಾಳೆ ಎಂದಿದ್ದಾನಂತೆ. ಮನೆಗೆ ಬಂದು ನೋಡಿದರೆ ಸ್ಪಂದನಾ ಮೃತದೇಹವಿರಲಿಲ್ಲ. ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಮಗಳು ಹೆಣವಾಗಿದ್ದಳು ಎಂದು ತಿಳಿದುಬಂದಿದೆ. ಆಕೆ ಇದ್ದಕ್ಕಿದ್ದಂತೆ ಸಾವನ್ನಪ್ಪಲು ಕಾರಣ ತಿಳಿಯುತ್ತಿಲ್ಲ, ಅಭಿಷೇಕ್ ಹಾಗೂ ಮನೆಯವರು ಹೊಡೆದು ಕೊಂದಿದ್ದಾರೆ ಎಂದು ಸ್ಪಂದನಾ ಪೋಷಕರು ಕಣ್ಣೀರಿಟ್ಟಿದ್ದಾರೆ.

ಸದ್ಯ ಅಭಿಷೇಕ್ ಹಾಗೂ ಕುಟುಂಬದ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

Related Articles

Back to top button