Karnataka News

*ಪತ್ನಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ*

ಪ್ರಗತಿವಾಹಿನಿ ಸುದ್ದಿ: ಮನುಷ್ಯ ಬರಬರುತ್ತಾ ಸಂಬಂಧಗಳನ್ನು, ಮನುಷತ್ವ, ಮಾನವೀಯತೆಯನ್ನೂ ಮರೆತು ಕ್ರೂರವಾಗಿ ವರ್ತಿಸುತ್ತಿದ್ದಾನೆ. ಇಲ್ಲೋರ್ವ ಪತಿ ಮಹಾಶಯ ಮಗನ ಎದುರಲ್ಲೇ ಪತ್ನಿಯ ಮೇಲೆ ಪೆಟ್ರೋಲ್ ಸಿರಿದು ಬೆಂಕಿ ಹಚ್ಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಇಲ್ಲಿನ ಹೆಚ್.ಡಿ.ಕೋಟೆ ತಾಲೂಕಿನ ಹನುಮಂತನಗರದಲ್ಲಿ ಈ ಘಟನೆ ನಡೆದಿದೆ. ಪತಿಯ ಅಟ್ಟಹಾಸಕ್ಕೆ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧುರಾ ಗಾಯಾಳು ಮಹಿಳೆ. ಮಹಿಳೆ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ವಿಜಯನಗರ ಜಿಲ್ಲೆಯ ಕೂಡ್ಲಗಿ ತಾಲೂಕಿನ ಬಿಬಿ ತಾಂಡಾದ ಮಲ್ಲೇಶ್ 8 ವರ್ಷಗಳ ಹಿಂದೆ ಅದೇ ಗ್ರಾಮದ ಮಧುರಾಳನ್ನು ವಿವಾಹವಾಗಿ ಹೆಚ್.ಡಿ.ಕೋಟೆಯ ಕೆ ಎಸ್ ಆರ‍್ ಟಿಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ.

ದಂಪತಿಗೆ ಮಗ ಕೂಡ ಇದ್ದಾನೆ. ಆರೇಳು ವರ್ಷದಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತ, ಅವಮಾನ, ಹಿಂಸೆ ನೀಡುತ್ತಲೇ ಇದ್ದ. ಪ್ರತಿದಿನ ಕುಡಿದು ಬಂದು ತವರು ಮನೆಯಿಂದ ಸೈಟ್ ಕೊಡಿಸುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಮಧುರಾ, ಕೆಲ ದಿನಗಳ ಹಿಂದೆ ಎರಡು ದಿನದ ಮಟ್ಟಿಗೆಂದು ತವರಿಗೆ ಹೋಗಿ ಬರೋಣ ಎಂದು ಹೋಗಿದ್ದಳು. ಇದೇ ವಿಚಾರಕ್ಕೆ ಪತಿ ಮಹಾಶಯ ಕ್ಯಾತೆ ತೆಗೆದಿದ್ದಾನೆ. ಪತ್ನಿ ಮನೆಗೆ ಬಂದ ಕೂಡಲೇ ಆಕೆಯ ಮೇಲೆ ಪೆಟ್ರೋಲ್ ಸುದಿದು ಬೆಂಕಿ ಹಚ್ಚಿ ಕ್ರೌರ್ಯದ ಪರಾಕಾಷ್ಠೆ ಮೆರೆದಿದ್ದಾನೆ. ಮಧುರಾ ಸಾವು-ಬುದುಕಿನ ನಡುವೆ ಹೋರಾಟ ನಡೆಸಿದ್ದಾರೆ.

Home add -Advt

Related Articles

Back to top button