Karnataka NewsLatest

*ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ನವವಿವಾಹಿತೆ*

ಪ್ರಗತಿವಾಹಿನಿ ಸುದ್ದಿ: ವರ್ಷದ ಹಿಂದಷ್ಟೇ ವಿವಾಹವಾಗಿದ್ದ ನವವಿವಾಹಿತೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

24 ವರ್ಷದ ಮಾನಸಾ ಆತ್ಮಹತ್ಯೆಗೆ ಶರಣಾದವರು. ಕೋಲಾರದ ಹೊರವಲಯದ ಸಹಕಾರ ನಗರದಲ್ಲಿ ಈ ಘಟನೆ ನಡೆದಿದೆ. ಮಾನಸಾ ವರ್ಷದ ಹಿಂದಷ್ಟೇ ಉಲ್ಲಾಸ್ ಗೌಡ ಎಂಬಾತನನ್ನು ವಿವಾಹವಾಗಿದ್ದರು. ಎರಡೂ ಕುಟುಂಬ ನೋಡಿಯೇ ಮಾಡಿದ ಅರೇಂಜ್ ಮ್ಯಾರೇಜ್ ಆಗಿತ್ತು. ಆದಾಗ್ಯೂ ಮಾನಸಾಳಿಗೆ ಪತಿಯ ಮನೆಯವರು ಕಿರುಕುಳ, ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ.

ವರದಕ್ಷಿಣೆಗಾಗಿ ಪತಿ ಉಲ್ಲಾಸ್ ಹಾಗೂ ಆತನ ತಂದೆ-ತಾಯಿ ಮಾನಸಾಳಿಗೆ ಹಿಂಸಿಸುತ್ತಿದ್ದರು. ಇದರಿಂದ ಬೇಸತ್ತ ಮಾನಸಾ ತವರು ಮನೆಗೆ ಬಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ.

ಮನಸಾ ಶವವನ್ನು ಆಕೆಯ ಪತಿಯ ಮನೆ ಮುಂದಿಟ್ಟು ಪೋಷಕರು ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಘಟನೆ ಬೆನ್ನಲ್ಲೇ ಪತಿ ಉಲ್ಲಾಸ್ ಹಾಗೂ ಕುಟುಂಬದವರು ನಾಪತ್ತೆಯಾಗಿದ್ದಾರೆ.

Home add -Advt

Related Articles

Back to top button